ವರದಿಯ ಪ್ರಕಾರ, ವಿಪಿನ್ ಕುಮಾರ್ ತಮ್ಮ ಸ್ನೇಹಿತನೊಂದಿಗೆ ರೊಮೇನೆಸ್ಕು ಪಾರ್ಕ್ ಸಮೀಪ ನಡೆದುಕೊಂಡು ಹೋಗುತ್ತಿರುವಾಗ ಬಾಲಕಿ ಮಂಜುಗಡ್ಡೆ ಒಡೆದು ಕೆರೆಯೊಳಗೆ ಬೀಳುತ್ತಿರುವುದನ್ನು ಗಮನಿಸಿದರು. ಈ ವೇಳೆ ಒಂದು ಕ್ಷಣವೂ ಹಿಂಜರಿಯದೆ ಅವರು ಹತ್ತಿರದಲ್ಲಿದ್ದ ಸ್ಲೆಡ್ಜ್ ಬಳಸಿಕೊಂಡು ಬಾಲಕಿಯ ಕಡೆಗೆ ಸಾಗಿದರು. ಆದರೆ ಅವರ ಕೆಳಗಿದ್ದ ಮಂಜುಗಡ್ಡೆಯೂ ಒಡೆದುಹೋಗಿದ್ದು, ಅವರು ಸಹ ಹೆಪ್ಪುಗಟ್ಟಿದ ನೀರಿನೊಳಗೆ ಬಿದ್ದರು. ಆದರೂ ಧೈರ್ಯ ಕಳೆದುಕೊಳ್ಳದೆ ಬಾಲಕಿಯನ್ನು ಹಿಡಿದುಕೊಂಡು ನೀರಿನ ಮೇಲ್ಮೈಯಲ್ಲಿ ಸುಮಾರು 30 ನಿಮಿಷಗಳ ಕಾಲ ಬಾಲಕಿಯನ್ನು ರಕ್ಷಿಸುತ್ತಾ ತುರ್ತು ಸೇವಾ ಸಿಬ್ಬಂದಿ ಬರುವವರೆಗೆ ಕಾದರು.