VIDEO | ಏಕಕಾಲದಲ್ಲಿ ಇಬ್ಬರು ಯುವತಿಯರೊಂದಿಗೆ ರೊಮ್ಯಾನ್ಸ್ ಮಾಡಿದ ಭೂಪ!

romance with 2 young women inside car
Published on

ಲಕ್ನೋ: ಯುವಕನೊಬ್ಬ ಕಾರಿನಲ್ಲಿ ಇಬ್ಬರು ಯುವತಿಯರೊಂದಿಗೆ  ರೊಮ್ಯಾನ್ಸ್​​ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ‘

ವೀಡಿಯೊದಲ್ಲಿ, ಯುವಕ ಇನ್ನೋವಾ ಕಾರಿನಲ್ಲಿ ಇಬ್ಬರು ಮಹಿಳೆಯರನ್ನು ತಬ್ಬಿಕೊಂಡು ಚುಂಬಿಸುತ್ತಿರುವುದನ್ನು ಕಾಣಬಹುದು. ಉತ್ತರ ಪ್ರದೇಶದ ಬಾರಾಬಂಕಿ ಪ್ರದೇಶದಲ್ಲಿ ಲಕ್ನೋ-ಅಯೋಧ್ಯೆ ಎನ್‌ಎಚ್ 27 ರಲ್ಲಿ ಈ ಘಟನೆ ನಡೆದಿದೆ.

ಸಿಟಿ ಕೊತ್ವಾಲಿ ವ್ಯಾಪ್ತಿಯ ಸಫೇದಾಬಾದ್‌ನ ಕಾಳಿಕಾ ಹವೇಲಿ ರೆಸ್ಟೋರೆಂಟ್‌ನ ಪಾರ್ಕಿಂಗ್ ಪ್ರದೇಶದಲ್ಲಿ, ಯುವಕನೊಬ್ಬ ಇನ್ನೋವಾ ಕಾರಿನಲ್ಲಿ ಏಕಕಾಲದಲ್ಲಿ ಇಬ್ಬರು ಯುವತಿಯರ ಜತೆ ರೊಮ್ಯಾನ್ಸ್​​ ಮಾಡುತ್ತಿದ್ದನು. ಇನ್ನು ಅಲ್ಲೇ ಹತ್ತಿರದಲ್ಲಿದ್ದವರು ವಿಡಿಯೋ ಮಾಡಿ ಸೋಶಿಯಲ್​​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಈ ವೀಡಿಯೊವನ್ನು Instagram ಖಾತೆ @Nishantjournali ನಲ್ಲಿ ಹಂಚಿಕೊಳ್ಳಲಾಗಿದೆ. ನೆಟ್ಟಿಗರ ವಿಡಿಯೋ ಹರಿದಾಡುತ್ತಿದೆ. ನೆಟ್ಟಿಗರೊಬ್ಬರು, ‘ಓರೇ.. ಸಮಾಜ ಹದಗೆಡುತ್ತದೆ, ಮನೆ ಇಲ್ವಾ? ಎಂದು ನೆಟ್ಟಿಗರು ಕಾಮೆಂಟ್​​ ಮಾಡುತ್ತಿದ್ದಾರೆ.

ಈ ವೈರಲ್ ವಿಡಿಯೋಗೆ ಬಾರಾಬಂಕಿ ಪೊಲೀಸರು ಪ್ರತಿಕ್ರಿಯೆ ನೀಡಿದ್ದಾರೆ. ಎನ್‌ಎಚ್-27ರ ರೆಸ್ಟೋರೆಂಟ್ ಎದುರು ಈ ಘಟನೆ ನಡೆದಿದೆ... ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net