ಸರ್ಕಾರಿ ಆಸ್ಪತ್ರೆ ಬೆಡ್​ ಮೇಲೆ ರೊಮಾನ್ಸ್​, ಆಶಾ ಕಾರ್ಯಕರ್ತೆ ಜತೆ ಯುವಕನ ಲವ್ವಿಡವ್ವಿ ವಿಡಿಯೋ ವೈರಲ್​

hospital romance seen
Published on

ವಿಜಯಪುರ: ಇಲ್ಲೊಂದು ಜೋಡಿ ಆಸ್ಪತ್ರೆಯಲ್ಲೇ ಲವ್ವಿಡವ್ವಿಯಲ್ಲಿ ತಲ್ಲೀನವಾಗಿದ್ದು, ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇದೀಗ ಈ ವಿಡಿಯೋ ವೈರಲ್​ ಆಗಿದೆ.

ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ತಾಂಬಾದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಶಾ ಕಾರ್ಯಕರ್ತೆ ಮತ್ತು ಗ್ರಾಪಂ ಸದಸ್ಯ ರೊಮಾನ್ಸ್​ ಮಾಡಿದ್ದಾರೆ. ಆಸ್ಪತ್ರೆ ಬೆಡ್ ಮೇಲೆಯೇ ಈ ಜೋಡಿ ಹೊರಳಾಡಿದ್ದು, ಪರಸ್ಪರ ಚುಂಬಿಸಿದ್ದಾರೆ.

ದೃಶ್ಯದಲ್ಲಿರುವ ವ್ಯಕ್ತಿ ದೇವಪ್ಪ ಕರಿಯಪ್ಪ ಪೂಜಾರಿ ಎನ್ನಲಾಗಿದೆ. ಆಸ್ಪತ್ರೆ ಸಿಬ್ಬಂದಿಯೊಂದಿಗೆ ಕೊಠಡಿಯೊಂದರಲ್ಲಿ ಚೆಲ್ಲಾಟ ನಡೆಸಿದ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿವೆ. ದೃಶ್ಯದಲ್ಲಿರುವ ಲೇಡಿ ಆಸ್ಪತ್ರೆಯ ಆಶಾ ಕಾರ್ಯಕರ್ತೆ ಎನ್ನಲಾಗಿದ್ದು, ಈ ಬಗ್ಗೆ ತನಿಖೆ ನಡೆಯಬೇಕಿದೆ ಎನ್ನುತ್ತಾರೆ ಗ್ರಾಮಸ್ಥರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net