'ಈ ಹೊತ್ತಿಗೆ' ಕಾರ್ಯಕ್ರಮ.. 'ಕನ್ನಡ ನಾಟಕಗಳಲ್ಲಿ ಸ್ತ್ರೀ ಪಾತ್ರ'; ಇಲ್ಲಿದೆ ವಿವರ..

Drama (1)
Published on

ಬೆಂಗಳೂರು: 'ಈ ಹೊತ್ತಿಗೆ ಟ್ರಸ್ಟ್' ಬೆಂಗಳೂರಿನ ಕಪ್ಪಣ್ಣ ಅಂಗಳ ಮತ್ತು ನವದೆಹಲಿಯ ಸಾಹಿತ್ಯ ಅಕಾಡೆಮಿ ಸಹಯೋಗದಲ್ಲಿ 'ಕನ್ನಡ ನಾಟಕಗಳಲ್ಲಿ ಸ್ತ್ರೀ ಪಾತ್ರ' ಎಂಬ ವಿಷಯಾಧಾರಿತ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದೆ.

ಜೆ.ಪಿ.ನಗರ 1ನೇ ಹಂತದಲ್ಲಿರುವ ಕಪ್ಪಣ್ಣ ಅಂಗಳದಲ್ಲಿ ಆ. 20ರ ಬೆಳಗ್ಗೆ 10ಕ್ಕೆ ಈ ಕಾರ್ಯಕ್ರಮ ನಡೆಯಲಿದೆ. ಶ್ರಿನಿವಾಸ ಜಿ. ಕಪ್ಪಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ವಿವಿಧ ಗಣ್ಯರು ಮಾತನಾಡಲಿದ್ದಾರೆ.

‘ಕನ್ನಡ ನಾಟಕಗಳಲ್ಲಿ ಸ್ತ್ರೀ ಸಂವೇದನೆ’ ಕುರಿತು ಡಾ.ಕೆ.ವೈ. ನಾರಾಯಣಸ್ವಾಮಿ, ‘ವೃತ್ತಿ ರಂಗಭೂಮಿಯ ನಾಟಕಗಳ ಸ್ತ್ರೀ ಪಾತ್ರ’ ಬಗ್ಗೆ ಚಿಂದೋಡಿ ಬಂಗಾರೇಶ್, ‘ಆಧುನಿಕ ರಂಗಭೂಮಿಯ ನಾಟಕಗಳ ಸ್ತ್ರೀ ಪಾತ್ರ’ ಕುರಿತು ಎನ್. ಮಂಗಳ ಮತ್ತು ‘ರಂಗಭೂಮಿಯಲ್ಲಿ ಮಹಿಳೆಯರು’ ಕುರಿತು ಹೆಲನ್ ಮೈಸೂರು ಮಾತನಾಡಲಿದ್ದಾರೆ. ಪ್ರಾಸ್ತಾವಿಕ ಮಾತುಗಳನ್ನು ಜಯಲಕ್ಷ್ಮಿ ಪಾಟೀಲ್ ಆಡಲಿದ್ದು, ಕಾರ್ಯಕ್ರಮದ ನಿರೂಪಣೆಯನ್ನು, ಡಾ.ಎಸ್.ವಿ.ಸುಷ್ಮಾ ಮಾಡಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net