'ಲಾಲು ಪ್ರಸಾದ್​ ಯಾದವ್' VS​ ರೋಹಿಣಿ ಆಚಾರ್ಯ! ತಂದೆಗೆ ಸವಾಲು ಹಾಕಿದ್ರಾ ಮಗಳು ರೋಹಿಣಿ? ಇಲ್ಲಿದೆ ಅಸಲಿ ಸಂಗತಿ

WhatsApp Image 2024-05-03 at 8.55.12 AM
Published on

ಪಾಟ್ನಾ: ಆರ್​ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಮಗಳು ರೋಹಿಣಿ ಆಚಾರ್ಯ ಇದೀಗ ಲೋಕಸಭಾ ಚುನಾವಣೆ ಸರ್ಧೆಗೆ ಮುಂದಾಗಿದ್ದು, ತಂದೆಯ ಕ್ಷೇತ್ರದಿಂದಲೇ ಕಣಕ್ಕೆ ಇಳಿದಿರುವುದು ಅನೇಕರಿಗೆ ಭಾರೀ ಆಶ್ಚರ್ಯ ಮೂಡಿಸಿದೆ. ಅದರಲ್ಲೂ ಲಾಲು ಪ್ರಸಾದ್​ ಯಾದವ್ ಅವರ ಎದುರಿಗೆ ನಿಂತು, ತಂದೆಯ ವಿರುದ್ಧವೇ ಎಲೆಕ್ಷನ್ ಗೆಲ್ಲುವ ಸವಾಲು ಹಾಕಿದ್ದಾರೆಯೇ ಎಂದು ಅನೇಕರು ಭಾರೀ ಗೊಂದಲಕ್ಕೆ ಒಳಗಾಗಿದ್ದಾರೆ. ಆದರೆ, ಅಸಲಿಗೆ ಇದು ತಪ್ಪು ಕಲ್ಪನೆ!

ಸರಣ್​ ಲೋಕಸಭಾ ಕ್ಷೇತ್ರದಲ್ಲಿ ಆರ್​ಜೆಡಿಯಿಂದ ಕಣಕ್ಕಿಳಿದಿರುವ ರೋಹಿಣಿ ಆಚಾರ್ಯ ಎದುರು ಆಕೆಯ ತಂದೆಯ ಹೆಸರಿನ ಲಾಲು ಪ್ರಸಾದ್​ ಯಾದವ್​ ಎಂಬ ವ್ಯಕ್ತಿಯೇ ಸ್ಪರ್ಧೆಗೆ ಇಳಿದಿರುವುದು ಮೊದ ಮೊದಲು ಮತದಾರರಿಗೆ ತೀವ್ರ ಗೊಂದಲ ಮೂಡಿಸಿತ್ತು. ಆದರೆ, ಇದೀಗ ಈತ ಥೇಟ್​ ಆರ್​ಜೆಡಿ ನಾಯಕನ ಹೆಸರನ್ನೇ ಹೊಂದಿದ್ದಾರೆ ಎಂದು ಸ್ಪಷ್ಟವಾಗಿದೆ.

ಸರಣ್ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧೆಗೆ ಇಳಿದಿರುವ ರಾಷ್ಟ್ರೀಯ ಜನಸಂಭವನ ಪಕ್ಷದ ಅಭ್ಯರ್ಥಿ ಲಾಲು ಪ್ರಸಾದ್ ಯಾದವ್​ ಮೂಲತಃ ಒಬ್ಬ ಸಾಮಾನ್ಯ ರೈತರಾಗಿದ್ದು, ಆರ್​ಜೆಡಿ ನಾಯಕನ ಪುತ್ರಿಯ ವಿರುದ್ಧ ಸ್ಪರ್ಧೆಗೆ ಇಳಿದಿರುವುದು ಸದ್ಯ ರಾಜಕೀಯ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ. ಏಪ್ರಿಲ್​ 26ರಂದು ನಾಮಪತ್ರ ಸಲ್ಲಿಸಿದ ಯಾದವ್, "ಈ ಕ್ಷೇತ್ರದಲ್ಲಿ ಅನೇಕ ಬಾರಿ ಸ್ಪರ್ಧಿಸಿದ್ದೇನೆ. ಈ ಹಿಂದೆ ಬಿಹಾರದ ಸಿಎಂ ಆಗಿದ್ದ ರಬ್ರಿ ದೇವಿ ವಿರುದ್ಧವೂ ಕಣಕ್ಕಿಳಿದಿದ್ದೆ. ಖಂಡಿತ ಈ ಬಾರಿ ಭಾರೀ ಅಂತರರಿಂದ ಗೆಲ್ತೇನೆ" ಎಂದು ಭರವಸೆ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್). 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net