ಲಾರಿ ಪಲ್ಟಿ;ಬೆಳಗಾವಿ- ಬಾಗಲಕೋಟ ಹೆದ್ದಾರಿ ಬಂದ್

20240608_094817.jpg
Published on

ಬೆಳಗಾವಿ: ಬಾಗಲಕೋಟ- ಬೆಳಗಾವಿ ರಾಜ್ಯ ಹೆದ್ದಾರಿಯಲ್ಲಿ ಲಾರಿ ಪಲ್ಟಿಯಾಗಿರುವ ಹಿನ್ನೆಲೆ ಹೆದ್ದಾರಿಯಲ್ಲಿಯೇ ಸರತಿಸಾಲಿನಲ್ಲಿ ನಿಂತ ನೂರಾರು ವಾಹನಗಳು.

ಶುಕ್ರವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ಬಾಗಲಕೋಟ- ಹೆದ್ದಾರಿಯಲ್ಲಿ ಲಾರಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲಿಯೇ ಪಲ್ಟಿಯಾಗಿ ಬಿದ್ದಿದೆ. ಇದರಿಂದಾಗಿ ರಸ್ತೆಯು ಸಂಪೂರ್ಣ ಬಂದ್ ಆಗಿದೆ. ಇದರಿಂದಾಗಿ ಬೆಳಗ್ಗೆ 8 ಗಂಟೆಯಿಂದ ರಸ್ತೆಯ‌ಮೇಲೆ ವಾಹನಗಳು ನಿಂತಿವೆ. ಮತ್ತೊಂದೆಡೆ ಪಲ್ಟಿಯಾಗಿರುವ ಲಾರಿಯನ್ನು ಕ್ರೇನ್ ಗಳ ಮೂಲಕ ಎತ್ತುವ ಕೆಲಸ ಆರಂಭವಾಗಿದೆ. ಒಟ್ಟಿನಲ್ಲಿ ಹೆದ್ದಾರಿ ಬಂದ್ ಆಗಿದ್ದರಿಂದ ಪ್ರಯಾಣಿಕರು, ವಾಹನ ಸವಾರರು ಪರದಾಡಬೇಕಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net