ಫುಡ್ ಡೆಲಿವರಿಗೆ ಬಂತು ರೋಬೋ ಶ್ವಾನ

Untitled design (2)
Published on

ಜುರಿಚ್: ರೋಬಾಟ್​ಗಳು ಈಗ ಎಲ್ಲಾ ಕ್ಷೇತ್ರಗಳಿಗೂ ಕಾಲಿಡುತ್ತಿದ್ದು, ಹೊಸ ಪ್ರಯೋಗವೊಂದರಲ್ಲಿ ರೋಬೋ ಶ್ವಾನವನ್ನು ಬಳಸಿ ಫುಡ್ ಡೆಲಿವರಿ ಮಾಡುವಲ್ಲಿ ಆಹಾರ ವಿತರಣಾ ಕಂಪನಿ ಯಶಸ್ವಿಯಾಗಿದೆ. ಡಚ್ ಮೂಲದ ಬಹುರಾಷ್ಟ್ರೀಯ ಆಹಾರ ವಿತರಣಾ ಕಂಪನಿ ಜಸ್ಟ್ ಈಟ್ ಟೇಕ್​ಅವೇ ಡಾಟ್ ಕಾಮ್ ಸ್ವಿಟ್ಜರ್​ಲ್ಯಾಂಡ್​ನ ರೋಬೋಟಿಕ್ಸ್ ಕಂಪನಿಯ ಸಹಯೋಗದೊಂದಿಗೆ ಸ್ವಿಟ್ಜರ್​ಲ್ಯಾಂಡ್​ನ ಜ್ಯೂರಿಚ್​ನಲ್ಲಿ ಪ್ರಾಯೋಗಿಕವಾಗಿ ಫುಡ್ ಡೆಲಿವರಿ ಆರಂಭಿಸಿದೆ. ಕೃತಕ ಬುದ್ಧಿಮತ್ತೆಯನ್ನು ಆಧರಿಸಿ ಕಾರ್ಯನಿರ್ವಹಿಸುವ ಈ ರೋಬೋ ಶ್ವಾನಗಳ ಕಾಲುಗಳಿಗೆ ಚಕ್ರ ಅಳವಡಿಸಲಾಗಿದ್ದು, ಇವು ಗಂಟೆಗೆ 15 ಕಿ.ಮೀ. ವೇಗದಲ್ಲಿ ಸಂಚರಿಸುತ್ತವೆ ಮತ್ತು ಮೆಟ್ಟಿಲುಗಳನ್ನೂ ಹತ್ತುತ್ತವೆ ಮತ್ತು ಇಳಿಯುತ್ತವೆ. ಎಐ ತಂತ್ರಜ್ಞಾನದಿಂದ ತನ್ನ ದಾರಿಯಲ್ಲಿರುವ ತಡೆತಡೆಗಳನ್ನು ಗುರುತಿಸಿ ಸುರಕ್ಷಿತವಾಗಿ ತನ್ನ ಗುರಿಯನ್ನು ತಲುಪುತ್ತವೆ. ಇವುಗಳು ಮಳೆ, ಹಿಮ, ಬಿಸಿಲು ಸೇರಿದಂತೆ ಎಲ್ಲಾ ವಿಧದ ಹವಾಮಾನದಲ್ಲೂ ಕಾರ್ಯನಿರ್ವಹಿಸುತ್ತವೆ. ಕಮಾಂಡ್ ಸೆಂಟರ್​ನಿಂದ ರೋಬೋಗಳ ಮೇಲೆ ನಿಗಾ ಇರಿಸಬಹುದು ಎಂದು ಕಂಪನಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net