ಪುರಾತನ ದೇವಾಲಯದಲ್ಲಿ ದರೋಡೆ ಶಂಕೆ; ದೇವಾಲಯದ ಇಬ್ಬರು ಸೆಕ್ಯೂರಿಟಿ ಗಾರ್ಡ್​ಗಳನ್ನು ಕೊಚ್ಚಿ ಕೊಲೆ| Murder

ವಿಜಯವಾಣಿ - 2025-11-11T220715.560
Published on

ವಿರುಧುನಗರ: ತಮಿಳುನಾಡಿನ ವಿರುಧುನಗರ ಜಿಲ್ಲೆಯ ದೇವಧಾನಂನಲ್ಲಿರುವ ಪುರಾತನ ಹಿಂದೂ ದೇವಾಲಯವಾದ ನಚಡೈ ತವಿರ್ತರುಲಿಯ ದೇವಾಲಯದಲ್ಲಿ ಸೋಮವಾರ(ನ. 10) ರಾತ್ರಿ ದರೋಡೆ ಶಂಕೆ ನಡೆದಿದ್ದು, ಈ ವೇಳೆ ತಡೆಯಲು ಬಂದ ಇಬ್ಬರು ಸೆಕ್ಯೂರಿಟಿಗಾರ್ಡ್​ಗಳನ್ನು ಕೊಚ್ಚಿ ಕೊಲೆ ಮಾಡಲಾಗಿದೆ(Murder) ಎಂದು ವರದಿಯಾಗಿದೆ.

ಮೃತರನ್ನು ಪೆಚ್ಚಿ ಮುತ್ತು(50) ಮತ್ತು ಶಂಕರ ಪಾಂಡಿಯನ್(65) ಎಂದು ಗುರುತಿಸಲಾಗಿದ್ದು, ಇಬ್ಬರೂ ಸ್ಥಳೀಯ ನಿವಾಸಿಗಳು. ದಕ್ಷಿಣ ತಮಿಳುನಾಡಿನ ಪಂಜ ಸ್ಥಳಗಳಲ್ಲಿ ಒಂದಾದ ಪುರಾತನ ದೇವಾಲಯವಾದ 14ನೇ ಶತಮಾನದಲ್ಲಿ ನಿರ್ಮಿಸಲಾದ ನಚಡೈ ತವಿರ್ತರುಲಿಯ ದೇವಾಲಯದಲ್ಲಿ ಈ ಘಟನೆ ನಡೆದಿದೆ.

ಪೊಲೀಸ್ ಮೂಲಗಳ ಪ್ರಕಾರ, ದೇವಾಲಯವು ಬೆಳಿಗ್ಗೆ 7 ರಿಂದ 11 ರವರೆಗೆ ಮತ್ತು ಸಂಜೆ 5 ರಿಂದ 7 ರವರೆಗೆ ಕಾರ್ಯನಿರ್ವಹಿಸುತ್ತದೆ.  ಪೇಚಿ ಮುತ್ತು, ಶಂಕರ ಪಾಂಡಿಯನ್ ಹಾಗೂ ಮಾದಸಾಮಿ ಎಂಬ ಮೂವರು ಸೆಕ್ಯೂರಿಟಿಗಾರ್ಡ್​​ಗಳು ಕಾವಲು ಕಾಯುತ್ತಿದ್ದರು ಎನ್ನಲಾಗಿದೆ.

ಇಂದು ಬೆಳಗ್ಗೆ ಮಾದಸ್ವಾಮಿ ತನ್ನ ಸಹೋದ್ಯೋಗಿಗಳನ್ನು ರಾತ್ರಿ ಪಾಳಿಯಿಂದ ಬಿಡುಗಡೆ ಮಾಡಲು ಬಂದಾಗ ಇಬ್ಬರು ಕೊಲೆಯಾಗಿ ಬಿದ್ದಿರುವುದು ಕಂಡಿದ್ದು, ತಕ್ಷಣ ದೇವಾಲಯದ ಆಡಳಿತ ಮಂಡಳಿಗೆ ತಿಳಿಸಿದ್ದಾರೆ. ಜೊತೆಗೆ ಸೀತೂರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ವಿರುಧುನಗರ ಪೊಲೀಸ್ ವರಿಷ್ಠಾಧಿಕಾರಿ ಡಿ. ಕಣ್ಣನ್ ಸ್ಥಳಕ್ಕೆ ಭೇಟಿ ನೀಡಿದ್ದು, ಪ್ರಾಥಮಿಕ ತನಿಖೆಯ ಸಮಯದಲ್ಲಿ ದೇವಾಲಯದ ಹುಂಡಿಯನ್ನು ಒಡೆದು ತೆರೆದಿರುವುದನ್ನು ಕಂಡು ಬಂದಿದೆ. ಇದು ದರೋಡೆ ಯತ್ನದ ಸಮಯದಲ್ಲಿ ತಡೆಯಲು ಬಂದಾಗ ಇಬ್ಬರನ್ನು ಕೊಲೆ ಮಾಡಿರಬಹುದು ಎಂದು ಶಂಕಿಸಿದ್ದಾರೆ. ಇನ್ನು ಘಟನೆ ಬಗ್ಗೆ ಪ್ರಕರಣ ದಾಳಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net