

ನವದೆಹಲಿ: ವಿಚಿತ್ರ ಘಟನೆಯೊಂದು ರಸ್ತೆ ಬದಿಯ ಸಿಸಿಟಿವಿ ಕ್ಯಾಮೆರಾ(CCTV Footage) ಕಣ್ಣಿನಲ್ಲಿ ಸೆರೆಯಾಗಿದ್ದು, ಈ ದೃಶ್ಯಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ(Social Media) ಭಾರಿ ವೈರಲ್(Viral) ಆಗಿದೆ.
ಘಟನೆಯ ವಿವರ: ದೆಹಲಿಯ ರಸ್ತೆಯಲ್ಲಿ ಸಾಗುತ್ತಿದ್ದ ದಂಪತಿಗಳ ಬಳಿ ಬಂದ ದರೋಡೆಕೋರರು, ಏಕಾಏಕಿ ಅವರಿಗೆ ಬಂದೂಕು ತೋರಿಸಿ ಹಣ ಕೊಡಲು ಕೇಳಿದ್ದಾರೆ. ಕುಡಿದ ಅಮಲಿನಲ್ಲಿದ್ದ ಖದೀಮರ(Robbers) ಮಾತಿಗೆ ಬೆದರಿದ ಗಂಡ-ಹೆಂಡತಿ ತುಟಿಪಿಟಿಕ್ ಎನ್ನದೆ ಜೇಬಿನಲ್ಲಿದ್ದ 20 ರೂ. ಹಣವನ್ನು ಕಳ್ಳರಿಗೆ ತೋರಿಸಿದ್ದಾರೆ. ಕೇವಲ 20 ರೂ. ಇರುವುದನ್ನು ಕಂಡು ತಮ್ಮ ಬಳಿಯಿದ್ದ 100 ರೂ. ಹಣವನ್ನು ದಂಪತಿಗಳ ಕೈಗೆ ಕೊಟ್ಟು ಸ್ಥಳದಿಂದ ಖದೀಮರು ಪರಾರಿಯಾಗಿದ್ದಾರೆ.
ಇಬ್ಬರು ಆರೋಪಿಗಳಲ್ಲಿ ಒಬ್ಬನನ್ನು ಜಿಎಸ್‌ಟಿ ಅಕೌಂಟೆಂಟ್ ದೇವ್ ವರ್ಮಾ ಎಂದು ಗುರುತಿಸಲಾಗಿದ್ದು, ಮತ್ತೊಬ್ಬನನ್ನು ಖಾಸಗಿ ಕಂಪನಿ ಉದ್ಯೋಗಿ ಹರ್ಷ್ ರಜಪೂತ್ ಎಂದು ಗುರುತಿಸಲಾಗಿದೆ. ಅಪರಾಧಕ್ಕೆ ಬಳಸಿದ ಪಿಸ್ತೂಲ್, ಸ್ಕೂಟರ್ ಮತ್ತು 30 ಮೊಬೈಲ್ ಫೋನ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಖದೀಮರ ವಿರುದ್ಧ ನಾಲ್ಕು ಪ್ರಕರಣಗಳನ್ನು ದಾಖಲಿಸಿಕೊಂಡು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಡಿಸಿಪಿ ಶಹಧರ ರೋಹಿತ್ ಮೀನಾ ಮಾಹಿತಿ ನೀಡಿದ್ದಾರೆ,(ಏಜೆನ್ಸೀಸ್).