

ಅಮೆರಿಕಾ: ಕಳ್ಳತನಕ್ಕೆ ಎಂದು ಸಲೂನ್‌ಗೆ ಪ್ರವೇಶಿಸಿದ ದರೋಡೆಕೋರ ಸ್ಥಳದಲ್ಲಿದ್ದ ಜನರಿಗೆ ಕೈಯಲ್ಲಿದ್ದ ಆಯುಧ ತೋರಿಸಿ, ಹಣ ಕೊಡಿ ಎಂದು ಬೆದರಿಸಿದ್ದಾನೆ. ಇದಕ್ಕೆ ಯಾರೊಬ್ಬರೂ ಪ್ರತಿಕ್ರಿಯೆ ನೀಡದೆ ಇರುವ ದೃಶ್ಯವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
ಅಮೆರಿಕಾದ ಅಟ್ಲಾಂಟಾದಲ್ಲಿರುವ ಸಲೂನ್‌ಗೆ ನುಗ್ಗಿದ ದರೋಡೆಕೋರ, ಒಳಗೆ ಕುಳಿತ್ತಿದ್ದ ಗ್ರಾಹಕರು ಮತ್ತು ಸಿಬ್ಬಂದಿಗೆ ನಿಮ್ಮ ಬಳಿಯಿರುವ ಹಣವನ್ನು ಈ ಕೂಡಲೇ ನೀಡಬೇಕು ಎಂದು ಕೈಯಲ್ಲಿದ್ದ ಆಯುಧವನ್ನು ತೋರಿಸಿ ಬೆದರಿಕೆ ಹಾಕಿದ್ದಾನೆ. ಆದ್ರೆ, ಕಳ್ಳನ ಯಾವ ಮಾತಿಗೂ ಹೆದರದ ಜನರು, ಆತನಿಗೆ ಒಂದು ರೂಪಾಯಿ ನೀಡದಿರುವುದು ನೆಟ್ಟಿಗರ ಅಶ್ಚರ್ಯಕ್ಕೆ ಕಾರಣವಾಗಿದೆ. ಈ ಘಟನೆಯ ದೃಶ್ಯ ಮಳಿಗೆಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಸಲೂನ್ ಒಳಗೆ ಬಂದ ಕಳ್ಳ, "ಎಲ್ಲರೂ ಇಲ್ಲಿ ಕೇಳಿ, ನಿಮ್ಮ ಬಳಿ ಏನೇನಿದೆ ಎಲ್ಲವನ್ನೂ ನನಗೆ ಕೊಡಿ" ಎಂದು ಹೇಳಿದ್ದಾನೆ. "ಹಣ ಎಲ್ಲಿದೆ ಹೇಳು" ಎಂದು ಸಿಬ್ಬಂದಿಗೂ ಗದರಿಸಿದ್ದಾನೆ. ಆದ್ರೆ, ದರೋಡೆಕೋರನ ಈ ಮಾತುಗಳಿಗೆ ಕಿಂಚಿತ್ತು ಸ್ಪಂದಿಸದ ಗ್ರಾಹಕರು ಮತ್ತು ಸಿಬ್ಬಂದಿ ಮೂಕಪ್ರೇಕ್ಷಕರಂತೆ ಆತನನ್ನು ದಿಟ್ಟಿಸುತ್ತ ನೋಡಿದ್ದಾರೆ. ಇದನ್ನು ಕಂಡು ತಬ್ಬಿಬ್ಬಾದ ಕಳ್ಳನ್ನು ಸ್ಥಳದಿಂದ ಬರಿಗೈಯಲ್ಲಿ ಹಿಂತಿರುಗಿದ್ದಾನೆ,(ಏಜೆನ್ಸೀಸ್).