"ಬಘೀರ' ಬಳಿಕ ಕಳೆದ ಎರಡು ವರ್ಷಗಳಿಂದ ಶ್ರೀಮುರಳಿ ನಟಿಸಿರುವ ಬೇರೆ ಚಿತ್ರ ರಿಲೀಸ್ ಆಗಿಲ್ಲ. ಹಾಗಂತ ಅವರು ಬ್ರೇಕ್ನಲ್ಲಿದ್ದಾರೆ ಅಂತಲ್ಲ. ಬದಲಾಗಿ ಬ್ಯಾಕ್ ಟು ಬ್ಯಾಕ್ "ಉಗ್ರಾಯುಧಮ್' ಮತ್ತು "ಪರಾಕ್' ಚಿತ್ರಗಳಲ್ಲಿ ಬಿಜಿಯಾಗಿದ್ದಾರೆ. ಪ್ಯಾನ್ ಇಂಡಿಯಾ ಮೂಡಿಬರುತ್ತಿರುವ ಈ ಸಿನಿಮಾಗಳು ದೊಡ್ಡ ಬಜೆಟ್ನಲ್ಲಿ ಮೂಡಿಬರುತ್ತಿದ್ದು, ಶ್ರೀಮುರಳಿ ಕೂಡ ಭಿನ್ನ, ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚೆಗಷ್ಟೆ ಯುವಪ್ರತಿಭೆ ಹಾಲೇಶ್ ಕೋಗುಂಡಿ ಆ್ಯಕ್ಷನ್-ಕಟ್ ಹೇಳುತ್ತಿರುವ "ಪರಾಕ್' ಟೀಸರ್ ಬಿಡುಗಡೆ ಮಾಡಲಾಯಿತು. ಚೊಚ್ಚಲ ಪ್ರಯತ್ನದಲ್ಲೇ ಪ್ಯಾನ್ ಇಂಡಿಯಾ ಹೊರಟಿರುವ ಹಾಲೇಶ್ "ಪರಾಕ್' ಟೀಸರ್ ಮೂಲಕ ನಿರೀೆ ಮೂಡಿಸಿದ್ದಾರೆ. ಆ್ಯಕ್ಷನ್ ಪ್ರಧಾನ ಟೀಸರ್ನಲ್ಲಿ ಶ್ರೀಮುರಳಿ ಮಿಂಚಿದ್ದು, ಚರಣ ರಾಜ್ ಹಿನ್ನೆಲೆ ಸಂಗೀತ, ಸಂದೀಪ್ ಛಾಯಾಗ್ರಹಣ ಆ್ಯಕ್ಷನ್ ಅಬ್ಬರ ಹೆಚ್ಚಿಸಿದೆ. ನಿರ್ದೇಶಕ ಹಾಲೇಶ್, "ಇದು ಟೀಸರ್ ಅಷ್ಟೇ. ಸಿನಿಮಾದಲ್ಲಿ ಸಾಕಷ್ಟು ವಿಷಯಗಳಿವೆ. ಕಳೆದ ಡಿಸೆಂಬರ್ ಮತ್ತು ಜನವರಿಯಲ್ಲಿ ಶೂಟಿಂಗ್ ಮಾಡಿದ್ದು, ಶೇಕಡಾ 35ರಷ್ಟು ಭಾಗ ಚಿತ್ರೀಕರಣ ಮುಗಿದಿದೆ. ಉಳಿದಂತೆ ಆಗಸ್ಟ್ ಬಳಿಕ 46 ದಿನಗಳ ಶೂಟಿಂಗ್ ಶೆಡ್ಯೂಲ್ ಪ್ಲಾ$್ಯನ್ ಮಾಡಿಕೊಂಡಿದ್ದು, ಈ ವರ್ಷದಂತ್ಯಕ್ಕೆ ಚಿತ್ರೀಕರಣ ಪೂರ್ಣಗೊಳ್ಳಲಿದೆ. ಕನ್ನಡದ ನಟಿಯೇ ನಾಯಕಿಯಾಗಿ ನಟಿಸಲಿದ್ದು, ಕೆಲ ನಟಿಯರ ಜತೆ ಮಾತುಕತೆ ನಡೆಯುತ್ತಿದೆ. ಕೆಲವೇ ದಿನಗಳಲ್ಲಿ ಈ ಬಗ್ಗೆ ಅಧಿಕೃತ ಘೋಷಣೆ ಮಾಡಲಿದ್ದೇವೆ' ಎಂದು ಮಾಹಿತಿ ನೀಡುತ್ತಾರೆ. ನಾಯಕ ಶ್ರೀಮುರಳಿ, ""ಪರಾಕ್' ಟೀಸರ್ ನೋಡಿದರೆ ಇದು ಸುಲಭವಾಗಿ ಆದ ಕೆಲಸವಲ್ಲ ಅಂತ ತಿಳಿಯುತ್ತದೆ. ಕಥೆಗಾಗಿಯೇ ಮೂರೂವರೆ ವರ್ಷ ಸಮಯ ತೆಗೆದುಕೊಂಡಿದ್ದೇವೆ. ಈ ಟೀಸರ್ ಪ್ಲಾ$್ಯನ್ ಮಾಡಲು ಎರಡೂವರೆ ವರ್ಷ ಬೇಕಾಯಿತು. ಹೊಸ ನಿರ್ದೇಶಕ, ಹೊಸ ನಿರ್ಮಾಣ ಸಂಸ್ಥೆಗಳ ಜತೆ ಕೆಲಸ ಮಾಡುವುದೇ ನನಗೆ ಕಿಕ್ಕು! ಅವರ ಆಲೋಚನೆ ಇಷ್ಟವಾಗುತ್ತದೆ. ಹೀಗಾಗಿಯೇ ಇತ್ತೀಚೆಗೆ ಹೊಸ ತಂಡಗಳ ಜತೆ ಹೆಚ್ಚು ಕೆಲಸ ಮಾಡುತ್ತಿದ್ದೇನೆ ಎಂದರು.