ಪುತ್ತೂರು ನಗರ ಸಭೆಯಲ್ಲಿ ಬೀದಿ ಬದಿ ವ್ಯಾಪಾರಿಗಳ ಸಭೆ

IMG-20230811-WA0006
Published on

ಪುತ್ತೂರು: ಬೀದಿ ವ್ಯಾಪಾರಿಗಳ ಕುಟುಂಬದ ಸುರಕ್ಷತೆಯ ನಿಟ್ಟಿನಲ್ಲಿ ಪ್ರಧಾನಿಗಳು ವಿಶೇಷ ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ಪುತ್ತೂರಿನಲ್ಲಿ ಬೀದಿ ಬದಿ ವ್ಯಾಪಾರಿಗಳ ಸಂಖ್ಯೆ ಕಡಿಮೆ ಇದ್ದಾರೆ. ನಗರ ಸಭೆ ವ್ಯಾಪ್ತಿಯಲ್ಲಿ 740ಮಂದಿಯನ್ನು ಗುರುತಿಸುವ ಗುರಿ ಸರ್ಕಾರ ನೀಡಿದ್ದು, 361ಮಂದಿಯನ್ನು ಗುರುತಿಸಲಾಗಿದೆ. ಪುತ್ತೂರಿನಲ್ಲಿ ಶೇ.90ರಷ್ಟು ದಾಖಲೆ ಸಂಗ್ರಹವನ್ನು ಪೂರ್ಣಗೊಳಿಸಲಾಗಿದೆ ಎಂದು ಪುತ್ತೂರು ನಗರ ಸಭೆ ಪೌರಾಯುಕ್ತ ಮಧು ಎಸ್. ಮನೋಹರ ಹೇಳಿದರು.

ಅವರು ಶುಕ್ರವಾರ ನಗರ ಸಭೆಯಲ್ಲಿ ಸ್ವಾತಂತ್ರ್ಯೋತ್ಸವದ ಅಮೃತಮಹೋತ್ಸವದ ಅಂಗವಾಗಿ ವಿವಿಧ ಇಲಾಖೆಗಳ ವತಿಯಿಂದ ಸ್ವನಿಧಿಯಿಂದ ಸಮೃದ್ಧಿ ಮೇಳ ಮತ್ತು ಮೈ ಬೀ ಡಿಜಿಟಲ್ ಕ್ಯಾಂಪ್ ಉದ್ಘಾಟಿಸಿ ಮಾತನಾಡಿದರು.

ಕೌಶಲ್ಯಾಭಿವೃದ್ಧಿ ಉಧ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಅಭಿಯಾನ ವ್ಯವಸ್ಥಾಪಕಿ ಐರಿನ್ ರೆಬೆಲ್ಲೋ ಮಾತನಾಡಿ ಅಸಂಘಟಿತ ವಲಯದಲ್ಲಿ ಕೆಲಸ ನಿರ್ವಹಿಸುವ ಬೀದಿ ಬದಿಯ ವ್ಯಾಪಾರಿಗಳು ಅನಿಶ್ಚಿತವಾಗಿ ಜೀವನ ಸಾಗಿಸಬೇಕಾಗಿದೆ. ಬೀದಿ ಬದಿ ವ್ಯಾಪಾರಿಗಳ ಜೀವನ ಮಟ್ಟ ಸುಧಾರಿಸಬೇಕೆಂಬ ನಿಟ್ಟಿನಲ್ಲಿ ಯೋಜನೆಯನ್ನು ಹಾಕಲಾಗಿದೆ. ಡಿಜಿಟಲೀಕರಣದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದು ಡಿಜಿಟಲ್ ವಹಿವಾಟಿಗೆ ಪ್ರತಿಯೊಬ್ಬರು ಬರಬೇಕು ಎಂದರು.

ಆಹಾರ ನಿರೀಕ್ಷಕಿ ಸರಸ್ವತಿ, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಪದ್ಮಾವತಿ, ಹಿರಿಯ ಕಾರ್ಮಿಕ ನಿರೀಕ್ಷಕ ಗಣಪತಿ ಹೆಗಡೆ, ವಿವಿಧ ಬ್ಯಾಂಕ್ ಅಧಿಕಾರಿಗಳು ಹಾಜರಿದ್ದರು. ನಗರ ಸಭೆ ಸಿಬ್ಬಂದಿ ಕರುಣಾಕರ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net