

ರಾಣೆಬೆನ್ನೂರ: ಹಳೆ ತುಮ್ಮಿನಕಟ್ಟಿ ರಸ್ತೆಗೆ ಕಾಂಕ್ರಿಟ್ ಹಾಕಿ ಅಕ್ಕಪಕ್ಕದಲ್ಲಿ ಚರಂಡಿ ನಿರ್ಮಿಸಬೇಕು ಎಂದು ಒತ್ತಾಯಿಸಿ ತಾಲೂಕಿನ ಕುಮಾರಪಟ್ಟಣ ಕೋಡಿಯಾಲ ಗ್ರಾಮಸ್ಥರು ಬುಧವಾರ ಕೋಡಿಯಾಲ ಗ್ರಾಪಂ ಪಿಡಿಒ ಅಂಬಿಕಾ ಅವರಿಗೆ ಮನವಿ ಸಲ್ಲಿಸಿದರು.
ಸ್ಥಳೀಯ ನಿವಾಸಿ ಉಮಾ ಅಣಬೆ ಮಾತನಾಡಿ, ಹಳೆ ತುಮ್ಮಿನಕಟ್ಟಿ ರಸ್ತೆಯಲ್ಲಿ ಚರಂಡಿ ಹಾಗೂ ಸಿ.ಸಿ. ರಸ್ತೆ ಇಲ್ಲದ ಕಾರಣ ಮಳೆಗಾಲದಲ್ಲಿ ಮೊಣಕಾಲದವರೆಗೆ ನೀರು ನಿಂತು ಓಡಾಡಲು ತೊಂದರೆಯಾಗುತ್ತಿದೆ. ಮಳೆಗಾಲದಲ್ಲಿ ಊರಿನ ಎಲ್ಲ ನೀರು ಚರಂಡಿ ಮುಖಾಂತರ ಬಂದು ವಾಗೀಶ ನಗರದಲ್ಲಿ ನಿಲ್ಲುತ್ತಿದೆ. ಇದರಿಂದ ಸೊಳ್ಳೆಗಳ ಉತ್ಪತ್ತಿ ತಾಣವಾಗಿದೆ.
ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು, ಶಾಸಕರು ಇತ್ತಗಮನ ಹರಿಸಿ ಆದಷ್ಟು ಬೇಗ ಸಮಸ್ಯೆಗೆ ಪರಿಹಾರ ಒದಗಿಸಬೇಕು ಎಂದರು.
ಪ್ರಮುಖರಾದ ಗಂಗಮ್ಮ, ಮೀರಾ ವೇರ್ಣೆಕರ, ಅಮೃತ ವರ್ಷಿಣಿ ವಿದ್ಯಾಲಯದ ಪ್ರತಿನಿಧಿಗಳು ಇದ್ದರು.