400 ವರ್ಷ ಹಳೆಯ ಆಲದ ಮರ ರಕ್ಷಣೆಗೆ ರಸ್ತೆ ವಿನ್ಯಾಸ ಬದಲು

Nation-1
Published on

ಮುಂಬೈ: 400 ವರ್ಷ ಹಳೆಯ ಆಲದ ಮರ ರಕ್ಷಿಸಲು ಮಹಾರಾಷ್ಟ್ರ ಸರ್ಕಾರ ರಸ್ತೆ ಯೋಜನೆಯನ್ನೇ ಬದಲಿಸಿದೆ.

ರಸ್ತೆ ಯೋಜನೆಗಾಗಿ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿರುವ ಈ ಮರವನ್ನು ಕಡಿಯಲು ನಿರ್ಧರಿಸಲಾಗಿತ್ತು. ಆದರೆ ಸ್ಥಳೀಯರು ಇದಕ್ಕೆ ವ್ಯಾಪಕ ಪ್ರತಿಭಟನೆ ವ್ಯಕ್ತಪಡಿಸಿದ್ದರು. ಯಾವುದೇ ಕಾರಣಕ್ಕೂ ಈ ಮರಕ್ಕೆ ಕೊಡಲಿಯೇಟು ಬೀಳುವುದಿಲ್ಲ ಎಂದು ಮಹಾರಾಷ್ಟ್ರ ಪರಿಸರ ಸಚಿವ ಆದಿತ್ಯ ಠಾಕ್ರೆ ಶನಿವಾರ ಘೋಷಿಸಿದ್ದಾರೆ. ಮರ ಕಡಿಯುವ ಯೋಚನೆಯನ್ನು ಭಾರತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್​ಎಚ್​ಎಐ) ಕೈ ಬಿಟ್ಟಿದೆ.

ಮರವನ್ನು ಹಾಗೇ ಉಳಿಸಿಕೊಂಡು ಅದರ ಸಮೀಪದಲ್ಲಿ ಹೆದ್ದಾರಿ ಹಾದುಹೋಗುವಂತೆ ನಕ್ಷೆ ಬದಲಾಯಿಸಲು ನಿರ್ಧರಿಸಿದೆ. ಎನ್​ಎಚ್​ಎಐ ಅಧಿಕಾರಿಗಳಿಗೆ ಬರೆದ ಒಂದು ಪತ್ರದಿಂದಾಗಿ ಆಲದ ಮರ ಮರುಜೀವ ಪಡೆದಿದೆ ಎಂದು ಠಾಕ್ರೆ ಟ್ವೀಟ್​ನಲ್ಲಿ ಹೇಳಿದ್ದಾರೆ. ಈ ಮರದ ರೆಂಬೆಗಳು ಸುಮಾರು 400 ಚದರ ಮೀಟರ್ ವಿಸ್ತಾರದಲ್ಲಿ ಹರಡಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net