

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಬಿಆರ್ಟಿಎಸ್ ರಸ್ತೆ ಪಕ್ಕದ ಬೈರಿದೇವರಕೊಪ್ಪದ ಬಳಿ ಪೊಲೀಸ್ ಬಂದೋಬಸ್ತ್ನಲ್ಲಿ ಹಜರತ್ ಸಯ್ಯದ ಮೆಹಮೂದ್ ಶಹಾ ಖಾದ್ರಿ ದರ್ಗಾ ತೆರವು ಕಾರ್ಯಾಚರಣೆ ನಡೆಯುತ್ತಿದೆ.
ರಸ್ತೆ ಅಗಲೀಕರಣ ಹಿನ್ನೆಲೆ ದರ್ಗಾ ತೆರವಿಗೆ ಹೈಕೋರ್ಟ್ ಆದೇಶಿಸಿದ ಹಿನ್ನೆಲೆ ಬುಧವಾರ ಬೆಳಗಿನಜಾವವೇ ಕಾರ್ಯಾಚರಣೆ ಆರಂಭಗೊಂಡಿತು. ದರ್ಗಾ ಸುತ್ತಲೂ ಬ್ಯಾರಿಕೇಡ್ ಹಾಕಿ ಪೊಲೀಸ್ ಭದ್ರತೆಯಲ್ಲಿ ತೆರವು ಕಾರ್ಯಾಚರಣೆ ನಡೆಯುತ್ತಿದ್ದು, ಹಳೇ ಹುಬ್ಬಳ್ಳಿಯ ದರ್ಗಾದ ಇಬ್ಬರು, ಕಸಬಾಪೇಟೆ ದರ್ಗಾದ ಓರ್ವ ಮೌಲ್ವಿ ಸ್ಥಳದಲ್ಲಿದ್ದರು. ದರ್ಗಾದ ಘೋರಿಯನ್ನ ಸುರಕ್ಷಿತವಾಗಿ ತೆರವುಗೊಳಿಸುವಂತೆ ಮೌಲ್ವಿಗಳು ಮನವಿ ಮಾಡಿದ್ದಾರೆ.