ಏಕಾಏಕಿ ಗಾಢ ಕೆಂಪು ಬಣ್ಣಕ್ಕೆ ತಿರುಗಿದ ನದಿ: ಸತ್ಯಾಂಶ ಬಯಲಿಗೆಳೆದ ಅಧಿಕಾರಿಗಳು

red river japan
Published on

ಜಪಾನ್​: ನದಿಯೊಂದು ಏಕಾಏಕಿ ಗಾಢ ಕೆಂಪು ಬಣ್ಣಕ್ಕೆ ತಿರುಗಿರುವ ಅಚ್ಚರಿಯ ಘಟನೆಯ ಘಟನೆ ಜಪಾನ್​ನ ನಗೋ ನಗರದಲ್ಲಿ ನಡೆದಿದೆ.

ಇದನ್ನೂ ಓದಿ: ದೆಹಲಿ ಮೆಟ್ರೋ ಒಳಗೆ ಮದ್ಯ ಕೊಂಡೊಯ್ಯಲು ಮುಕ್ತ ಅವಕಾಶ! ಆದರೆ…

ನದಿಯ ನಿಗೂಢ​​ ರೂಪಾಂತರದ ಬಗ್ಗೆ ಸ್ಥಳೀಯರು ಕಳವಳ ವ್ಯಕ್ತಪಡಿಸಿದ್ದು, ಈ ಕುರಿತಾದ ಫೋಟೋ ಮತ್ತು ವೀಡಿಯೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಕುರಿತು ನೆಟ್ಟಿಗರು ನಾನಾ ರೀತಿಯ ಕಾಮೆಂಟ್​​ಗಳ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು, ಪೊಲೀಸರು ಹಾಗೂ ಪ್ರಾಕೃತಿಕ ವಿಕೋಪ ಇಲಾಖೆ ಅಧಿಕಾರಿಗಳು ಈ ಕುರಿತು ತನಿಖೆ ಮಾಡಿ ಸತ್ಯಾಂಶವನ್ನು ಬಯಲಿಗೆ ಎಳೆದಿದ್ದಾರೆ.

ನಗರದಲ್ಲಿನ ಖಾಸಗಿ ಬಿಯರ್​ ಕಂಪನಿಯ ಜನರು ಸೇವಿಸುವ ಆಹಾರದ ಬಣ್ಣವನ್ನು ಬಿಯರ್​ನ್ನು ಶೇಖರಿಸಿಡುವ ಕೂಲಿಂಗ್ ಸಿಸ್ಟಮ್‌ಗಳಲ್ಲಿ ಬಳಸಿತ್ತು. ಇದು ಆಕಸ್ಮಿಕವಾಗಿ ಸೋರಿಕೆಯಾಗಿ ಚರಂಡಿ ಮೂಲಕ ನದಿ ಸೇರಿದ್ದೇ ಈ ಅಚ್ಚರಿಯ ಘಟನೆಗೆ ಕಾರಣವಾಗಿದೆ. ಕಂಪನಿಯು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಬಣ್ಣದ ಸೋರಿಕೆಯಿಂದಾಗಿ ಜನರು ವಿನಾಕಾರಣ ಗಾಬರಿಯಾಗಿದ್ದಾರೆ. ಉಂಟಾದ ತೊಂದರೆಗೆ ಕ್ಷಮೆಯಾಚಿಸುತ್ತೇವೆ ಎಂದು ಹೇಳಿದೆ.

ಇದನ್ನೂ ಓದಿ: ದೀಪಾವಳಿಗೆ ಹೌಸ್​ಫುಲ್ 5 ಸಿನಿಮಾ ಘೋಷಿಸಿದ ಅಕ್ಷಯ್ ಕುಮಾರ್!

ಅಲ್ಲದೇ,  ಕಂಪನಿಯ ಅಧಿಕಾರಿಗಳು ಪ್ರೊಪಿಲೀನ್ ಗ್ಲೈಕಾಲ್ ಎಂಬ ರಾಸಾಯನಿಕ ಬಣ್ಣ ಬದಲಾವಣೆಗೆ ಕಾರಣವಾದ ವಸ್ತುವೆಂದು ಗುರುತಿಸಿದ್ದಾರೆ. ಸ್ಥಳೀಯ ಅಧಿಕಾರಿಗಳು ಇದು ಜನರ ಆರೋಗ್ಯದ ಮೇಲೆ ಇದು ಪರಿಣಾಮ ಬೀರುವುದಿಲ್ಲ ಎಂದು ಭರವಸೆ ನೀಡಿದ್ದು, ಈ ಬಣ್ಣ ಸೋರಿಕೆಯಿಂದಾಗಿ ಪರಿಸರಕ್ಕೂ ತೊಂದರೆಯಾಗುವುದಿಲ್ಲ ಎಂದು ಹೇಳಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net