More

    ದೆಹಲಿ ಮೆಟ್ರೋ ಒಳಗೆ ಮದ್ಯ ಕೊಂಡೊಯ್ಯಲು ಮುಕ್ತ ಅವಕಾಶ! ಆದರೆ…

    ನವದೆಹಲಿ: ದೆಹಲಿ ಮೆಟ್ರೋ ರೈಲು ಕಾರ್ಪೊರೇಷನ್ (ಡಿಎಂಆರ್‌ಸಿ) ಶುಕ್ರವಾರ ಹೊಸ ನಿಯಮಾವಳಿಗಳ ಕುರಿತು ಮಾಹಿತಿ ನೀಡಿದ್ದು, ದೆಹಲಿ ಮೆಟ್ರೋ ಒಳಗೆ ಒಬ್ಬ ವ್ಯಕ್ತಿಗೆ ಎರಡು ಸೀಲ್ ಮಾಡಿದ ಮದ್ಯದ ಬಾಟಲಿಗಳನ್ನು ಸಾಗಿಸಲು ಅನುಮತಿ ನೀಡಲಾಗಿದೆ. ಆದರೆ ಈಗಲೂ ಮೆಟ್ರೋ ಒಳಗೆ ಕುಡಿಯುವುದನ್ನು ನಿಷೇಧಿಸಲಾಗಿದೆ.

    ಹಿಂದಿನ ಆದೇಶದ ಪ್ರಕಾರ, ಏರ್‌ಪೋರ್ಟ್​ನ ಎಕ್ಸ್‌ಪ್ರೆಸ್ ಲೈನ್​ಅನ್ನು ಹೊರತುಪಡಿಸಿ ದೆಹಲಿ ಮೆಟ್ರೋದಲ್ಲಿ ಮದ್ಯ ಸಾಗಿಸುವುದನ್ನು ನಿಷೇಧಿಸಲಾಗಿತ್ತು. ಆದರೆ ನವೀಕರಿಸಿದ ನಿಯಮಾವಳಿಗಳ ಪ್ರಕಾರ ದೆಹಲಿ ಮೆಟ್ರೋನ ಯಾವುದೇ ಭಾಗದಲ್ಲಿ ಬೇಕಾದರೂ ಓರ್ವ ವ್ಯಕ್ತಿಗೆ ಎರಡು ಸೀಲ್ಡ್ ಬಾಟಲಿ ಮದ್ಯ ಸಾಗಿಸುವ ಅವಕಾಶ ನೀಡಲಾಗಿದೆ.

    ಇದನ್ನೂ ಓದಿ: ರೈಲಿನೊಳಗೆ ಡ್ಯಾನ್ಸ್​ ಮಾಡಬೇಡಿ ಎಂದು ಮೀಮ್​ ಶೇರ್​ ಮಾಡಿದ ದೆಹಲಿ ಮೆಟ್ರೋ!

    ಡಿಎಂಆರ್‌ಸಿ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ, “ಪ್ರತಿ ವ್ಯಕ್ತಿಗೆ ಎರಡು ಸೀಲ್ ಮಾಡಿದ ಮದ್ಯದ ಬಾಟಲಿಗಳನ್ನು ದೆಹಲಿ ಮೆಟ್ರೋದಲ್ಲಿ ಏರ್‌ಪೋರ್ಟ್ ಎಕ್ಸ್‌ಪ್ರೆಸ್ ಲೈನ್‌ನಲ್ಲಿನ ನಿಬಂಧನೆಗಳಿಗೆ ಸಮನಾಗಿ ಸಾಗಿಸಲು ಅನುಮತಿಸಲಾಗಿದೆ. CISF ಮತ್ತು DMRC ಯ ಅಧಿಕಾರಿಗಳನ್ನು ಒಳಗೊಂಡ ಸಮಿತಿಯು ಹಿಂದಿನ ಆದೇಶವನ್ನು ಪರಿಶೀಲಿಸಿದೆ. ಹಿಂದಿನ ಆದೇಶದ ಪ್ರಕಾರ, ಏರ್‌ಪೋರ್ಟ್ ಎಕ್ಸ್‌ಪ್ರೆಸ್ ಲೈನ್ ಹೊರತುಪಡಿಸಿ ದೆಹಲಿ ಮೆಟ್ರೋದಲ್ಲಿ ಮದ್ಯ ಸಾಗಿಸುವುದನ್ನು ನಿಷೇಧಿಸಲಾಗಿತ್ತು.

    ಆದಾಗ್ಯೂ, ಮೆಟ್ರೋ ಆವರಣದಲ್ಲಿ ಮದ್ಯಪಾನ ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಮೆಟ್ರೋ ಪ್ರಯಾಣಿಕರು ಪ್ರಯಾಣಿಸುವಾಗ ಸರಿಯಾದ ವರ್ತನೆಯನ್ನು ಕಾಪಾಡಿಕೊಳ್ಳಲು ವಿನಂತಿಸಲಾಗಿದೆ. ಪ್ರಯಾಣಿಕರು ಎಲ್ಲಾದರೂ ಮದ್ಯದ ಅಮಲಿನಲ್ಲಿ ಅಸಭ್ಯವಾಗಿ ವರ್ತಿಸುವುದು ಕಂಡುಬಂದಲ್ಲಿ, ಕಾನೂನಿನ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಸೂಕ್ತ ಕ್ರಮವನ್ನು ತೆಗೆದುಕೊಳ್ಳಲಾಗುತ್ತದೆ.

    ಇದನ್ನೂ ಓದಿ: ಟೀಕೆಗೆ ತಲೆ ಕೆಡಿಸಿಕೊಂಡಿಲ್ಲ… ನಾನು ಅಂದಿನಿಂದ ಹೀಗೆಯೇ ಓಡಾಡುತ್ತಿದ್ದೇನೆ; ದೆಹಲಿ ಮೆಟ್ರೋದಲ್ಲಿ ಅರೆ ಬೆತ್ತಲಾದ ಯುವತಿ

    ಡಿಎಂಆರ್‌ಸಿ, “ಯಾವುದೇ ಪ್ರಯಾಣಿಕರು ಮದ್ಯದ ಅಮಲಿನಲ್ಲಿ ಅಸಭ್ಯವಾಗಿ ವರ್ತಿಸುವುದು ಕಂಡುಬಂದಲ್ಲಿ, ಕಾನೂನಿನ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಸೂಕ್ತ ಕ್ರಮವನ್ನು ತೆಗೆದುಕೊಳ್ಳಲಾಗುತ್ತದೆ” ಎಂದಿದೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts