ಶಾಲಾ ತರಗತಿಗಳಲ್ಲಿ ಮೊಬೈಲ್ ಫೋನ್ ನಿಷೇಧ; ಬ್ರಿಟನ್ ಪ್ರಧಾನಿ ರಿಶಿ ಸುನಕ್

classroom
Published on

ಬ್ರಿಟನ್: ಬ್ರಿಟನ್ ಪ್ರಧಾನಿ ರಿಶಿ ಸುನಕ್ , ಮಕ್ಕಳ ಭವಿಷ್ಯದ ಮೇಲೆ ಪರಿಣಾಮ ಬೀರುವುದನ್ನು ತಡೆಯಲು ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದ್ದಾರೆ. ಈಕುರಿತಾದ ವಿಡಿಯೋ ವೈರಲ್‌ ಆಗಿದೆ.

ತರಗತಿ ಕೊಠಡಿಗಳಲ್ಲಿ ಶಾಂತಿಯುತ ವಾತಾವರಣವನ್ನು ನಿರ್ಮಿಸಲು, ಮೊಬೈಲ್ ಫೋನ್‌ಗಳನ್ನು ನಿಷೇಧಿಸುವ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಯುಕೆ ಪ್ರಧಾನ ಮಂತ್ರಿ ರಿಷಿ ಸುನಕ್ ವೀಡಿಯೊ ಸಂದೇಶವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ವಿರಾಮದ ಸಮಯ ಸೇರಿದಂತೆ ಇಂಗ್ಲೆಂಡ್‌ನಾದ್ಯಂತ ಶಾಲೆಗಳಲ್ಲಿ ಮೊಬೈಲ್ ಫೋನ್‌ಗಳನ್ನು ನಿಷೇಧಿಸಲು ಫೆಬ್ರವರಿ 19 ಸೋಮವಾರದಂದು ಸರ್ಕಾರವು ಹೊಸ ಮಾರ್ಗದರ್ಶನವನ್ನು ಪ್ರಕಟಿಸಿದೆ.

UK ಯಲ್ಲಿನ ಕೆಲವು ಶಾಲೆಗಳು ಈಗಾಗಲೇ ಫೋನ್ ನಿಷೇಧಗಳನ್ನು ಜಾರಿಗೆ ತಂದಿದ್ದರೂ, ಸದರ್ಕಾರದ ಅಧಿಕೃತ ಮಾರ್ಗದರ್ಶನವು ದೇಶಾದ್ಯಂತ ಸ್ಥಿರವಾದ ನೀತಿಯನ್ನು ಸ್ಥಾಪಿಸುವ ಗುರಿಯನ್ನು ಹೊಂದಿದೆ.

ವಿಡಿಯೋದಲ್ಲಿ ಏನಿದೆ?: ಮೊಬೈಲ್ ಬಳಕೆ ದುಷ್ಪರಿಣಾಮಗಳ ಬಗ್ಗೆ ಮಾತನಾಡುತ್ತಾ ವಿಡಿಯೋ ಸಂದೇಶ ನೀಡುವಾಗ  ಅವರ ಮೊಬೈಲ್ ಫೋನ್  ರಿಂಗಣಿಸತೊಡಗುತ್ತದೆ. ಮೊದಲ ಬಾರಿ ರಿಂಗಣಿಸಿದಾಗ ಅದರ ಕಟ್‌ ಮಾಡಿ ಮತ್ತೆ ತಮ್ಮ ಬ್ಲೇಜರ್​​ನೊಳಕ್ಕೆ ತುರುಕುತ್ತಾರೆ ಪ್ರಧಾನಿ ರಿಶಿ. ಆದರೆ ಮೊಬೈಲ್​ ಮತ್ತೆ ಮತ್ತೆ ರಿಂಗಣಿಸುತ್ತದೆ. ಈ ಬಾರಿ ಕಾಲ್‌ ಕಟ್‌ ಮಾಡಿ ಟೇಬಲ್​ ಮೇಲೆ ಬಿಸಾಡುತ್ತಾರೆ. ಈ ಮೂಲಕ ಸಾಂಕೇತಿಕವಾಗಿ ನಿನ್ನ ಬಾಯಿ ಮುಚ್ಚಿಸಿದ್ದೇನೆ ಎಂದು ರಿಶಿ ಗಂಭೀರವಾಗಿ ಘೋಷಿಸುತ್ತಾರೆ. ಶಾಲಾ ತರಗತಿಗಳಲ್ಲಿ ಮೊಬೈಲ್ ಫೋನ್ ನಿಷೇಧ ಮಾಡಿ ವೀಡಿಯೊ ಸಂದೇಶವನ್ನು ಹಂಚಿಕೊಂಡಿದ್ದಾರೆ.

ಬ್ರಿಟನ್‌ ಪ್ರಧಾನಿ ಈ ನಿರ್ಧಾರಕ್ಕೆ ಸೋಶಿಯಲ್‌ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net