

ಲಂಡನ್: ಬಿಟ್ರನ್ ಸಂಸತ್ನಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನ ಪ್ರಧಾನಿ ರಿಷಿ ಸುನಕ್ ಸಮರ್ಥಿಸಿಕೊಂಡಿದ್ದಾರೆ.
2002ರ ಗುಜರಾತ್ ಕೋಮುಗಲಭೆಯಲ್ಲಿ ನರೇಂದ್ರ ಮೋದಿ ಅವರ ನಾಯಕತ್ವ ಪ್ರಶ್ನಿಸಿ ಬಿಬಿಸಿಯಲ್ಲಿ ಇತ್ತೀಚಿಗೆ ಸಾಕ್ಷ್ಯಚಿತ್ರ ಪ್ರಸಾರವಾಗಿತ್ತು. ಗುರುವಾರ ಬ್ರಿಟನ್ ಸಂಸತ್ನಲ್ಲಿ ಈ ಬಗ್ಗೆ ಪಾಕ್ ಮೂಲದ ಮೂಲದ ಬ್ರಿಟನ್ ಸಂಸದ ಇಮ್ರಾನ್ ಹುಸೇನ್ ಪ್ರಸ್ತಾಪಿಸಿದರು. 2002ರಲ್ಲಿ ಗುಜರಾತ್ನಲ್ಲಿ ನಡೆದ ಗಲಭೆಯಲ್ಲಿ ನೂರಾರು ಜನರು ಪ್ರಾಣ ಕಳೆದುಕೊಂಡರು. ಆ ವೇಳೆ ನರೇಂದ್ರ ಮೋದಿ ಅವರು ಗುಜರಾತ್ನ ಸಿಎಂ ಆಗಿದ್ದರು. ಅವರೇ ಈ ಹಿಂಸಾಚಾರಕ್ಕೆ ನೇರ ಹೊಣೆಗಾರರು. ಮೃತರ ಕುಟುಂಬಕ್ಕೆ ನ್ಯಾಯಸಿಕ್ಕಿಲ್ಲ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ರಿಷಿ ಸುನಕ್, ನಾವು ಎಲ್ಲಿಯೂ ಕಿರುಕುಳ, ಹಿಂಸಾಚಾರವನ್ನ ಸಹಿಸುವುದಿಲ್ಲ. ಈ ಬಗ್ಗೆ ಯುಕೆ ಸರ್ಕಾರದ ನಿಲುವು ಸ್ಪಷ್ಟವಾಗಿದೆ. ಆದರೆ ಮೋದಿ ಅವರು ಪಾತ್ರದ ಬಗ್ಗೆ ಖಚಿತತೆ ಇಲ್ಲ ಎಂದರು.
ಇನ್ನು ಬಿಬಿಸಿ ಪ್ರಸಾರ ಮಾಡಿದ ಸಾಕ್ಷ್ಯಚಿತ್ರವನ್ನ ಭಾರತ ಮೂಲದ ಬ್ರಿಟನ್ ನಾಗರಿಕರು ಖಂಡಿಸಿದ್ದಾರೆ. ಕೋಟ್ಯಂತರ ಹಿಂದುಗಳ ಭಾವನೆಗೆ ನೋವುಂಟು ಮಾಡಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ ಎಂದು ವರದಿಯಾಗಿದೆ.(ಏಜೆನ್ಸೀಸ್)