Kantara Chapter 1; ಕೌನ್ ಬನೆಗಾ ಕರೋಡ್​ಪತಿಯಲ್ಲಿ ರಿಷಬ್ ಶೆಟ್ಟಿ 'ಲುಂಗಿ' ಹವಾ: ಅಮಿತಾಭ್ ಹೇಳಿದ್ದೇನು?

Bbau (46)
Published on

ಬೆಂಗಳೂರು: ಕನ್ನಡದ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ಕಾಂತಾರ ಚಾಪ್ಟರ್​- 1(Kantara Chapter 1) ಈ ವರ್ಷದ ಅತಿದೊಡ್ಡ ಬ್ಲಾಕ್‌ಬಸ್ಟರ್‌ಗಳಲ್ಲಿ ಒಂದಾಗಿದ್ದು, ಕೇವಲ 16 ದಿನಗಳಲ್ಲಿ 717 ಕೋಟಿ ರೂ. ಗಳಿಸಿ ಬಾಕ್ಸ್ ಆಫೀಸ್‌ನಲ್ಲಿ ದಾಖಲೆಯ ಗಳಿಕೆಯನ್ನು ಮುಂದುವರೆಸಿದೆ.

ಇದೀಗ ವಿಶ್ವದ್ಯಾಂತ ಸಂಚಲನ ಮೂಡಿಸಿದ್ದು, ವಿವಿಧ ಕ್ಷೇತ್ರಗಳು ಸೇರಿದಂತೆ ವಿಭಿನ್ನ, ಬಗೆಬಗೆಯ ಸಂದರ್ಶನಗಳಲ್ಲಿ ರಿಷಬ್​ ಶೆಟ್ಟಿ ಭಾಗಿಯಾಗಿದ್ದಾರೆ. ಅದರಲ್ಲೂ ಬಾಲಿವುಡ್​ನ ಬಿಗ್​​ಬಿ ಅಮಿತಾಭ್ ನಡೆಸಿಕೊಡುವ 'ಕೌನ್ ಬನೆಗಾ ಕರೋಡ್​ಪತಿ' ಕಾರ್ಯಕ್ರಮದಲ್ಲಿ ರಿಷಬ್​ ಎಲ್ಲರ ಗಮನ ಸೆಳೆದಿದ್ದಾರೆ.

ಲುಂಗಿ ಜಾರಿ ಹೋದರೆ...

ಇನ್ನು ಕಾರ್ಯಕ್ರಮದಲ್ಲಿ 'ಲುಂಗಿ' ಡ್ಯಾನ್ಸ್ ಸೀನ್‌ಗೆ ಸಂಬಂಧಿಸಿದಂತೆ ಕೆಬಿಸಿ-17 ರ ಎಪಿಸೋಡ್‌ನಲ್ಲಿ ಅಮಿತಾಭ್ ಬಚ್ಚನ್ ಅವರು ರಿಷಬ್ ಅವರಿಗೆ ಲುಂಗಿ (ಪಂಚೆ) ಉಡುಗೊರೆ ನೀಡಿದ್ದರು."ಸರ್, ನಾನು ಖಂಡಿತವಾಗಿ ಇದನ್ನು ಧರಿಸುತ್ತೇನೆ. ಇದನ್ನು ಧರಿಸುವ ಕಲೆ ಕಲಿಯಬೇಕು, ಅಲ್ಲಿಯೇ ಸರಿಯಾಗಿ ಕಟ್ಟದಿದ್ದರೆ ಇದು ಜಾರಿ ಹೋದರೆ ವಿಷಯ ಅಂತರರಾಷ್ಟ್ರೀಯ ಮಟ್ಟಕ್ಕೇರಿಬಿಡುತ್ತದೆ!" ಎಂದು ಈ ಸಂದರ್ಭದಲ್ಲಿ ಬಿಗ್ ಬಿ ಹಾಸ್ಯಾಸ್ಪದವಾಗಿ ಹೇಳಿದ್ದರು. ಇದೀಗ ಇದರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್ ಆಗಿದೆ.

ಇದಲ್ಲದೆ, ರಿಷಬ್ ಶೆಟ್ಟಿ ಅವರು ಮೋಹನ್‌ಲಾಲ್‌ರ ಸಿಗ್ನಚರ್ ಲುಂಗಿ ಕಟ್ಟುವ ಸ್ಟೈಲ್ ಅನ್ನು ಇಮಿಟೇಟ್ ಮಾಡಿದಾಗ, ಅಮಿತಾಭ್ ಅವರು "ಇದು ಒಂದು ಕಲೆ. ಲುಂಗಿಯನ್ನು ಕಿಕ್ ಮಾಡಿ, ಕೈಯಲ್ಲಿ ಹಿಡಿದು ತ್ವರಿತವಾಗಿ ಕಟ್ಟಬೇಕು" ಎಂದು ಪ್ರಶಂಸಿಸಿದರು.

ಕಾಂತಾರ ಬ್ಲಾಕ್​​ ಬಸ್ಟರ್​

ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ 2025ರ ಅಕ್ಟೋಬರ್ 2 ರಂದು (ಗಾಂಧಿ ಜಯಂತಿ ಮತ್ತು ದಸರಾ ಹಬ್ಬದ ಸಂದರ್ಭದಲ್ಲಿ) ಬಿಡುಗಡೆಯಾಯಿತು. ಮೂಲ ಕಾಂತಾರ (2022) ಸಿನಿಮಾದ ಮೊದಲ ಅಧ್ಯಾಯವಾಗಿ, ಇದು ತುಳುನಾಡಿನ ಐತಿಹಾಸಿಕ ಮತ್ತು ಆಧ್ಯಾತ್ಮಿಕ ಕಥೆಯನ್ನು ಆಧರಿಸಿದ್ದು, ಲೋಕಸಂಸ್ಕೃತಿ, ಭೂತ ಕೋಲ, ಸಂಗೀತ ಮತ್ತು ಉನ್ನತ ಚಿತ್ರೀಕರಣದ ಮಿಶ್ರಣದಿಂದ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದೆ.

ಬಾಕ್ಸ್ ಆಫೀಸ್​ನಲ್ಲಿ ಧೂಳೆಬ್ಬಿಸಿದ ಕಾಂತಾರ-1

ಈ ಸಿನಿಮಾ 2025ರ ಅತ್ಯಂತ ಯಶಸ್ವಿಯಾದ ಕನ್ನಡ ಸಿನಿಮಾ ಆಗಿ ಮಾರ್ಕ್ ಮಾಡಿದ್ದು, ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ 500 ಕೋಟಿ ರೂಪಾಯಿಗಳನ್ನು ಮೀರಿದ 12ನೇ ಸಿನಿಮಾ ಆಗಿದೆ.

ಭಾರತೀಯ ನೆಟ್ ಕಲೆಕ್ಷನ್: 506.25 ಕೋಟಿ ರೂ.

ಭಾರತೀಯ ಗ್ರಾಸ್ ಕಲೆಕ್ಷನ್: 597.37 ಕೋಟಿ ರೂ.

ಓವರ್‌ಸೀಸ್ ಗ್ರಾಸ್: 106 ಕೋಟಿ ರೂ.

ವಿಶ್ವವ್ಯಾಪಿ ಒಟ್ಟು: 703 ಕೋಟಿಗೂ ಹೆಚ್ಚು (18ನೇ ದಿನದಲ್ಲಿ ದೇಶೀಯವಾಗಿ 17.5 ಕೋಟಿ ರೂ. ಸೇರುವಂತೆ 36% ಏರಿಕೆಯೊಂದಿಗೆ ಮುಂದುವರಿದಿದೆ).(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net