ಕಾಂತಾರ ಖ್ಯಾತಿಯ ರಿಷಭ್ ಶೆಟ್ಟಿಯನ್ನು ಭೇಟಿ ಮಾಡಿದ ಎಬಿಡಿ!

rishabh abd
Published on

ನವದೆಹಲಿ: ಜಗತ್ತು ಕಂಡ ಅದ್ಭುತ ಕ್ರಿಕೆಟಿಗರಲ್ಲಿ ಒಬ್ಬ ಎಬಿ ಡೆ ವಿಲಿಯರ್ಸ್​ ನಿನ್ನೆ ಭಾರತಕ್ಕೆ ಬಂದಿಳಿದಿದ್ದಾರೆ. ಅವರು ಈಗ ಕಾಂತಾರ ಖ್ಯಾತಿಯ ಕರಾವಳಿ ನಟ ರಿಷಭ್​ ಶೆಟ್ಟಿಯನ್ನು ಭೇಟಿ ಮಾಡಿದ್ದು ಈಗ ಎಲ್ಲೆಡೆ ಫೋಟೊಗಳು ವೈರಲ್​ ಆಗುತ್ತಿವೆ.

ಇಂದು ರಿಷಭ್ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಒಂದು ವಿಡಿಯೋ ಪೋಸ್ಟ್​ ಮಾಡಿದ್ದು ಅದಕ್ಕೆ ಕ್ಯಾಪ್ಶನ್​ ಆಗಿ 'ಇವತ್ತು ರಿಯಲ್​ 360 ಯನ್ನು ಭೇಟಿ ಮಾಡಿದೆ!' ಎಂದು ಬರೆದುಕೊಂಡಿದ್ದಾರೆ.

ಕಾಮೆಂಟ್​ ವಿಭಾಗದಲ್ಲಿ ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದು 'ಇಬ್ಬರು ಲೆಜೆಂಡ್​ಗಳು', 'ವಾಹ್​' ಎಂದೆಲ್ಲಾ ಬರೆದು ಸಂತೋಷ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net