IMDb ರೇಟಿಂಗ್​​ನಲ್ಲಿ ಕೆ.ಜಿ.ಎಫ್ 2 ಹಿಂದಿಕ್ಕಿದ ಕಾಂತಾರ ಸಿನಿಮಾ

Kanthara
Published on

ಬೆಂಗಳೂರು: ಎಲ್ಲೆಲ್ಲೂ ಕಾಂತಾರ ಸಿನಿಮಾದ್ದೇ ಹವಾ. ಇದೀಗ ವಿವಿಧ ಭಾಷೆಯಲ್ಲಿ ಸಿನಿಮಾ ಬಿಡುಗಡೆ ಕಾಣುತ್ತಿದ್ದ. ಸಿನಿಮಾ ಬಿಡುಗಡೆಯಾಗಿ ಎರಡು ವಾರಗಳು ಕಳೆದರೂ ಕೂಡಾ ಚಿತ್ರಮಂದಿರಗಳು ಹೌಸ್​​ಫುಲ್ ಪ್ರದರ್ಶನ ಕಾಣುತ್ತಿದೆ. ಜನರು ಕುಟುಂಬ ಸಮೇತರಾಗಿ ಕಾಂತಾರ ಸಿನಿಮಾ ನೋಡಲು ಚಿತ್ರಮಂದಿರದತ್ತ ಹೆಜ್ಜೆ ಹಾಕುತ್ತಿದ್ದಾರೆ.

ಕಾಂತಾರ ಸಿನಿಮಾ 100 ಕೋಟಿ ರೂ. ಕ್ಲಬ್ ಸೇರುವ ಸನಿಹದಲ್ಲಿದೆ. ಇದೀಗ ಈ ಸಿನಿಮಾ ಮತ್ತೊಂದು ದಾಖಲೆ ಬರೆದಿದೆ. ಅದು ವಿಶ್ವದಾದ್ಯಂತ ತೆರೆಕಂಡಿದ್ದ ಕೆ.ಜಿ.ಎಫ್ 2 ಸಿನಿಮಾವನ್ನು ಹಿಂದಿಕ್ಕಿ ಈ ದಾಖಲೆ ಮಾಡುತ್ತಿದೆ. ಹೊಂಬಾಳೆ ಬ್ಯಾನರ್​​ನಲ್ಲಿ ನಿರ್ಮಾಣವಾದ ಕಾಂತಾರ ಸಿನಿಮಾ IMDbನಲ್ಲಿ ಅತೀ ಹೆಚ್ಚು ರೇಟಿಂಗ್ ಪಾಯಿಂಟ್ ಪಡೆದುಕೊಂಡ ಭಾರತೀಯ ಚಲನಚಿತ್ರವಾಗಿದೆ.

ಯಶ್ ನಟನೆಯ ಕೆ.ಜಿ.ಎಫ್ 2 ಸಿನಿಮಾ 8.4 ರೇಟಿಂಗ್​ ಹೊಂದಿತ್ತು. ಸ್ಟಾರ್ ನಿರ್ದೇಶಕ ರಾಜಮೌಳಿ ನಿರ್ದೇಶನದ ಆರ್​ಆರ್​ಆರ್​​ ಸಿನಿಮಾ 8 ರೇಟಿಂಗ್ ಪಡೆದುಕೊಂಡಿತ್ತು. ಇದೀಗ ಕನ್ನಡದ ಕಾಂತಾರ ಸಿನಿಮಾ 9.6 ರೇಟಿಂಗ್ ಪಾಯಿಂಟ್ ಪಡೆಯುವ ಮೂಲಕ IMDbನಲ್ಲಿ ಭಾರತೀಯ ಸಿನಿಮಾವೊಂದು ಅತೀ ಹೆಚ್ಚಿನ ರೇಟಿಂಗ್ ಪಾಯಿಂಟ್ ಪಡೆದುಕೊಂಡಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net