ನ್ಯಾಷನಲ್​ ಅವಾರ್ಡ್​​; ರಿಷಭ್​​​​​​​​​ ಶೆಟ್ಟಿಗೆ ಒಲಿದ ಅತ್ಯುತ್ತಮ ನಟ ಪಟ್ಟ

Untitled-design-2024-08-16T141017.008
Published on

ವರಮಹಾಲಕ್ಷ್ಮೀ ಹಬ್ಬ ಸಂಭಮದ ಜತೆಗೆ ಸ್ಯಾಂಡಲ್​ವುಡ್​ಗೆ​​ ಮತ್ತೊಂದು ಶುಭಸುದ್ದಿ. 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ (National Award) ಘೋಷಣೆ ಆಗಿದೆ. ಕನ್ನಡದ ಕಾಂತಾರ ಸಿನಿಮಾವನ್ನು ನಿರ್ದೇಶಿಸಿ ಮತ್ತು ನಟಿಸಿದ್ದ ರಿಷಭ್​​​​​​​​ ಶೆಟ್ಟಿಗೆ ಅತ್ಯುತ್ತಮ ನಟ ಪ್ರಶಸ್ತಿ ಒಲಿದಿದೆ. ಕೇಂದ್ರ ಮಾಹಿತಿ ಹಾಗೂ ಪ್ರಸಾರ ಇಲಾಖೆ ಈ ಪ್ರಶಸ್ತಿಯನ್ನು ಘೋಷಿಸಿದೆ.

ಕರ್ನಾಟಕದಲ್ಲಿನ 250ಕ್ಕೂ ಹೆಚ್ಚು ಥಿಯೇಟರ್​ಗಳಲ್ಲಿ ಜತೆಗೆ ಅಮೆರಿಕ, ಬ್ರಿಟನ್​, ಆಸ್ಟ್ರೇಲಿಯಾ ಹೀಗೆ ಜಾಗತಿಕವಾಗಿ ಇತರ ಸ್ಥಳಗಳಲ್ಲಿ ಏಕಕಾಲದಲ್ಲಿ ಕಾಂತಾರ ಸಿನಿಮಾ 2022 ಸೆಪ್ಟೆಂಬರ್​ 30ರಂದು ಬಿಡುಗಡೆಯಾಯಿತು. ಹೊಂಬಾಳೆ ಫಿಲ್ಮಂಸ್​ ಬ್ಯಾನರ್​​ನಲ್ಲಿ ನಿರ್ಮಾಣವಾಗಿದ್ದ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಸಖತ್ ಸೌಂಡ್​ ಮಾಡಿತ್ತು. ಬರೋಬ್ಬರಿ 400 ಕೋಟಿ ರೂಪಾಯಿಗೂ ಹೆಚ್ಚು ಗಳಿಸಿತ್ತು. ಭರ್ಜರಿ ಕಲೆಕ್ಷನ್​ ಪಡೆದ ಸಿನಿಮಾ ಕಾಂತಾರ ಕನ್ನಡದಲ್ಲಿ ತೆರೆಕಂಡ ಬಳಿಕ ಬೇರೆ ಭಾಷೆಗಳಿಗೂ ಡಬ್​​​ ಆಗಿ ಅಲ್ಲಿಯೂ ಕಾಂತಾರ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಬಂದಿತ್ತು.

2022ರ ಜನವರಿ 1 ರಿಂದ ಡಿಸೆಂಬರ್​​ 31ರವರೆಗಿನ ಸೆನ್ಸಾರ್​ ಆಗಿರುವ ಸಿನಿಮಾಗಳನ್ನು ಈ ಅವಾರ್ಡ್​​ಗೆ ಪರಿಗಣಿಸಲಾಗಿದೆ. ಈ ಪಟ್ಟಿಯಲ್ಲಿ ಕಾಂತಾರ ಸಿನಿಮಾವನ್ನು ನಿರ್ದೇಶಿಸಿ, ನಟಿಸಿದ್ದ ರಿಷಭ್​​ ಶೆಟ್ಟಿಗೆ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದೆ. ಅತ್ಯುತ್ತಮ ನಟ ಪ್ರಶಸ್ತಿಗೆ ದಕ್ಷಿಣದ ಇಬ್ಬರು ನಟರ ನಡುವೆ ಪೈಪೋಟಿ ಏರ್ಪಟಿತ್ತು. ರಿಷಭ್​ ಶೆಟ್ಟಿ ಹಾಗೂ ಮಲಯಾಳಂ ಮೆಗಾಸ್ಟಾರ್​​ ಮಮ್ಮುಟ್ಟಿ ಇಬ್ಬರ ಹೆಸರು ಮುನ್ನೆಲೆಯಲ್ಲಿತ್ತು. ಈ ಪೈಕಿ ರಿಷಭ್​ ಶೆಟ್ಟಿ ಅವರು ಅತ್ಯುತ್ತಮ ನಟ ಪಟ್ಟವನ್ನು ಪಡೆದುಕೊಂಡಿದ್ದಾರೆ. ಕಾಂತಾರ ಚಿತ್ರ ಇದುವರೆಗೂ 10 ಫಿಲ್ಮ್​​ಫೇರ್​ ಹಾಗೂ 10 ಸೈಮಾ ಪ್ರಶಸ್ತಿ ಪಡೆದುಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net