ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿದೆ ಹಿಂದುವಿರೋಧಿ ತಪ್ಪುಮಾಹಿತಿ: ಅಧ್ಯಯನವೊಂದರಿಂದ ಬಹಿರಂಗ..

Social Media
Social Media
Published on

ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಹಿಂದುವಿರೋಧಿ ತಪ್ಪುಮಾಹಿತಿಗಳು ಹೆಚ್ಚಾಗಿವೆ ಎಂಬ ಆತಂಕಕಾರಿ ವಿಷಯವೊಂದು ಹೊರಬಿದ್ದಿದೆ. ಅಧ್ಯಯನವೊಂದರ ಅಂಶಗಳು ಈ ಮಾಹಿತಿಯನ್ನು ಹೊರಗೆಡಹಿದೆ.

ಸೋಷಿಯಲ್ ಮೀಡಿಯಾ ಮತ್ತು ಮೆಸೇಜಿಂಗ್​ ಆ್ಯಪ್​ಗಳಲ್ಲಿ ಹಿಂದುಗಳ ವಿರುದ್ಧವಾಗಿ ತಪ್ಪು ಮಾಹಿತಿಗಳನ್ನು ಹರಿಬಿಡುತ್ತಿರುವ ಪ್ರಕರಣಗಳು ಕಳೆದ ಕೆಲವು ದಿನಗಳಿಂದ ಹೆಚ್ಚಾಗಿದೆ ಎಂಬುದು ಅಮೆರಿಕದ ರಟ್​ಜರ್ಸ್​ ಯುನಿವರ್ಸಿಟಿಯ ಅಧ್ಯಯನದಲ್ಲಿ ತಿಳಿದುಬಂದಿದೆ.

ಹಾಗಂತ ಹಿಂದುವಿರೋಧಿ ಸಂದೇಶಗಳೆಲ್ಲವೂ ಪಾಕಿಸ್ತಾನದಿಂದಲೇ ಪೋಸ್ಟ್ ಆಗುತ್ತಿಲ್ಲ. ಇರಾನ್ ಮತ್ತಿತರ ದೇಶಗಳಿಂದಲೂ ಈ ತಪ್ಪು ಮಾಹಿತಿ ಪೋಸ್ಟ್ ಆಗುತ್ತಿದೆ ಎಂದು ಈ ಅಧ್ಯಯನ ಹೇಳಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net