ಆಪರೇಷನ್​ ಸಿಂಧೂರ ಬಗೆಗಿನ ಚರ್ಚೆಯಿಂದ ವಿಪಕ್ಷಗಳು ದೂರ ಓಡುತ್ತಿವೆ ರಿಜಿಜು ವಾಗ್ದಾಳಿ!Kiren Rijiju

Kiren Rijiju
Published on

Kiren Rijiju: ಸಂಸತ್ತಿನಲ್ಲಿ ನಡೆಯುತ್ತಿರುವ ಆಪರೇಷನ್​ ಸಿಂಧೂರ ಚರ್ಚೆಯಿಂದ ವಿಪಕ್ಷಗಳು ದೂರು ಓಡುತ್ತಿವೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್​ ರಿಜಿಜು ಹೇಳಿದ್ದಾರೆ.

ಸಂಸತ್ತಿನ ಹೊರವಲಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಚಿವ ರಿಜಿಜು, ಆಪರೇಷನ್​ ಸಿಂಧೂರದ ಚರ್ಚೆ ಮುಗಿದ ನಂತರ ಬಿಹಾರದಲ್ಲಿ ಚುನಾವಣಾ ಆಯೋಗ ನಡೆಸುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯ ಕುರಿತು ಚರ್ಚೆಗೆ ಅವಕಾಶ ನೀಡುವುದಾಗಿ ಸರ್ಕಾರ ಭರವಸೆ ನೀಡಬೇಕೆಂದು ಪ್ರತಿಪಕ್ಷಗಳು ಬಯಸಿದ್ದವು ಎಂದು ತಿಳಿಸಿದ್ದಾರೆ.

ಅಲ್ಲದೇ, ಪ್ರತಿಪಕ್ಷಗಳು ಆಪರೇಷನ್​ ಸಿಂಧೂರ ಚರ್ಚೆಯಿಂದ ಪಲಾಯನ ಮಾಡುತ್ತಿವೆ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸಂಸತ್ತಿನ ಚರ್ಚೆಗಳು ನಿಯಮಗಳ ಪ್ರಕಾರ ನಡೆಯುತ್ತವೆ ಹಾಗೂ ವಿರೋಧ ಪಕ್ಷವು ತನ್ನ ಬದ್ದತೆಯಿಂದ ಹಿಂದೆ ಸರಿದು ಎಲ್ಲರಿಗೂ ದ್ರೋಹ ಬಗೆದಿದೆ ಎಂದು ಆರೋಪಿಸಿದ್ದಾರೆ.

ಆಪರೇಷನ್​ ಸಿಂಧೂರ ಕುರಿತ ಚರ್ಚೆಯಿಂದ ತಪ್ಪಿಸಿಕೊಳ್ಳಲು ವಿರೋಧ ಪಕ್ಷಗಳು ಬೇರೆ ಮಾರ್ಗಗಳನ್ನು ಹುಡುಕುತ್ತಿವೆ ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net