

ಎನ್.ಆರ್.ಪುರ: ತಾಲೂಕಿನ ವಿವಿಧ ದೇವಸ್ಥಾನಗಳಲ್ಲಿ ಋಗ್ ಉಪಾಕರ್ಮ ನಡೆಯಿತು. ಪಟ್ಟಣದ ಅಗ್ರಹಾರದ ಉಮಾಮಹೇಶ್ವರ ಸಭಾ ಭವನದಲ್ಲಿ ಶಿವಮೊಗ್ಗದ ವೇ.ಬ್ರ.ನಾಗರಾಜ್ ವಸಿಷ್ಠ ಅವರ ಪೌರೋಹಿತ್ಯದಲ್ಲಿ ಉಪಾಕರ್ಮ ನೆರವೇರಿತು.
ವಿಪ್ರರು ಆಗಮಿಸಿ ಯಜ್ಞೋಪವಿತವನ್ನು ಧಾರ್ಮಿಕ ವಿಧಿ ವಿಧಾನದೊಂದಿಗೆ ಬದಲಾಯಿಸಿಕೊಂಡರು. ಪುಣ್ಯ, ಗಣಪತಿ ಪೂಜೆ, ಸಪ್ತ ಋಷಿ ಪೂಜೆ, ಹೋಮ ಮಾಡಲಾಯಿತು. ಸೀತೂರಿನ ಗೋಪಾಲಕೃಷ್ಣ ದೇವಸ್ಥಾನದಲ್ಲಿ ನಡೆದ ಉಪಾಕರ್ಮವು ಪುರೋಹಿತರಾದ ಗುರುರಾಜ ಉಪಾಧ್ಯ ರೆಂಜಾಳ ಅವರ ಮಾರ್ಗದರ್ಶನದಲ್ಲಿ ಜರುಗಿತು.
ಯಡಗೆರೆ ರಾಮನಾಥೇಶ್ವರ ದೇವಸ್ಥಾನದಲ್ಲಿ ನಡೆದ ಉಪಾಕರ್ಮದಲ್ಲಿ ಹೊನ್ನೇಕೊಪ್ಪ ನಾಗರಾಜ್ ಭಟ್, ಕೊಪ್ಪ ಶಶಿಧರ ಭಟ್ ಅವರು ಧಾರ್ಮಿಕ ಕಾರ್ಯ ನಡೆಸಿಕೊಟ್ಟರು. ಕಾನೂರು ಸಿದ್ದಿವಿನಾಯಕ ದೇವಸ್ಥಾನದಲ್ಲಿ ನಡೆದ ಉಪಾಕರ್ಮವು ನೇರಳೆ ಪ್ರಕಾಶ್ ಭಟ್ಟರ ಪುರೋಹಿತ್ಯದಲ್ಲಿ ನಡೆಯಿತು. ಸುತ್ತಮುತ್ತಲಿನ ವಿಪ್ರರು ಭಾಗವಹಿಸಿದ್ದರು.