

ಚಾಮರಾಜನಗರ: ಇಂದು (ಅ.25) ಬೆಳಗ್ಗೆ ಖಾಸಗಿ ಬಸ್ ಮತ್ತು ಬೈಕ್ ನಡುವೆ ಭೀಕರ ಅಪಘಾತವಾಗಿದ್ದು (Road Accident), ಬೈಕ್ ಸವಾರ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿದ್ದಾನೆ.
ನಗರದ ಗಾಳೀಪುರ ಬಡಾವಣೆಯ ನಿವಾಸಿ ಆಲೀಮ್ (28) ಮೃತ ದುರ್ದೈವಿ. ಈತ ಶುಕ್ರವಾರ ಬೆಳಗ್ಗೆ ಚಾಮರಾಜನಗರ-ಗುಂಡ್ಲುಪೇಟೆ ರಸ್ತೆಯ ವೀರನಪುರ ಕ್ರಾಸ್ ಮಾರ್ಗದಲ್ಲಿ ಹೋಗುವಾಗ ಖಾಸಗಿ ಬಸ್ಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿಯ ರಭಸದ ಪರಿಣಾಮ ಆಲೀಮ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ.
ಅಪಘಾತದ ಸಂಭವಿಸಿದ ಸ್ಥಳಕ್ಕೆ ಗ್ರಾಮಾಂತರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತ ಯುವಕನ ದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ.