ಯಳಂದೂರು: ತಾಲೂಕಿನ ಮೆಲ್ಲಹಳ್ಳಿ ಗೇಟ್ ಸಮೀಪ ದ್ವಿಚಕ್ರ ವಾಹನ ಸವಾರ ಆಯತಪ್ಪಿ ಬಿದ್ದು ಬುಧವಾರ ರಾತ್ರಿ ಮೃತಪಟ್ಟಿದ್ದಾನೆ.
ಕೊಳ್ಳೇಗಾಲ ಪಟ್ಟಣದ ಭೀಮನಗರ ಬಡಾವಣೆ ನಿವಾಸಿ ಮನೋಜ್‌ಕುಮಾರ್ (25) ಮೃತ. ತಾಲೂಕಿನ ಹೊನ್ನೂರು ಗ್ರಾಮದಲ್ಲಿ ದೀಪವಾಳಿ ಹಬ್ಬದ ನಿಮಿತ್ತ ತನ್ನ ಅಜ್ಜಿಯ ಊರಿಗೆ ತೆರಳಿ ನಂತರ ಸಂತೇಮರಹಳ್ಳಿ ಹೋಗಿ ಮತ್ತೆ ವಾಪಸ್ ಕೊಳ್ಳೇಗಾಲ ಕಡೆಗೆ ರಾಷ್ಟ್ರೀಯ ಹೆದ್ದಾರಿ ಮೂಲಕ ದ್ವಿಚಕ್ರ ವಾಹನದಲ್ಲಿ ಹೋಗುವ ವೇಳೆ ಮೆಲ್ಲಹಳ್ಳಿ ಗೇಟಿನ ಸಮೀಪದಲ್ಲಿ ಬೈಕ್‌ನಿಂದ ಆಯತಪ್ಪಿ ಬಿದ್ದು ಗಂಭೀರ ಗಾಯವಾಗಿದ್ದು, ನಂತರ ರಸ್ತೆಯಲ್ಲಿ ಹೋಗುವ ವಾಹನ ಸವಾರರು ಗಮನಿಸಿ ತಕ್ಷಣ ಆಟೋ ಮೂಲಕ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ತಲೆಗೆ ತೀವ್ರ ಸ್ವರೂಪದ ಗಾಯವಾದ ಹಿನ್ನೆಲೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಈ ಬಗ್ಗೆ ಯಳಂದೂರು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.