ರಸ್ತೆ ದುರವಸ್ಥೆಗೆ ಬೈಕ್ ಸವಾರ ಬಲಿ; ಸ್ಕಿಡ್ ಆಗಿ ಲಾರಿ ಚಕ್ರದಡಿಗೆ ಸಿಲುಕಿ ಸಾವು

Bike
Published on

ದೇವನಹಳ್ಳಿ: ರಾಜಧಾನಿ ಬೆಂಗಳೂರಿನಲ್ಲೇ ರಸ್ತೆ ದುರವಸ್ಥೆಗೆ ಬೈಕ್ ಸವಾರರು ಪ್ರಾಣ ಕಳೆದುಕೊಂಡ ಪ್ರಕರಣಗಳು ಹಲವಾರಿವೆ. ಇದೀಗ ಅಂಥದ್ದೇ ಒಂದು ಪ್ರಕರಣ ನಡೆದಿದ್ದು, ದ್ವಿಚಕ್ರವಾಹನ ಸವಾರನೊಬ್ಬ ಬಲಿಯಾಗಿದ್ದಾನೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.

ಬಾಗೇಪಲ್ಲಿ ಮೂಲದ ವೆಂಕಟೇಶ್ (30) ಸಾವಿಗೀಡಾದ ಬೈಕ್ ಸವಾರ. ದೇವನಹಳ್ಳಿ ಪಟ್ಟಣದ ವಿಜಯಪುರ ಕ್ರಾಸ್​ನಲ್ಲಿ ಈ ಅಪಘಾತ ಸಂಭವಿಸಿದೆ. ಬೈಕ್ ಸಾಗುತ್ತಿದ್ದಾಗ ರಸ್ತೆಯಲ್ಲಿನ ಜಲ್ಲಿಯಿಂದಾಗಿ ಸ್ಕಿಡ್​ ಆಗಿದ್ದು, ಸವಾರ ಲಾರಿ ಚಕ್ರದಡಿಗೆ ಸಿಲುಕಿ ಸಾವಿಗೀಡಾಗಿದ್ದಾನೆ.

ದೇವನಹಳ್ಳಿಯಿಂದ ಚಿಕ್ಕಬಳ್ಳಾಪುರ ಕಡೆಗೆ ಹೋಗುತ್ತಿದ್ದಾಗ ಈ ಪ್ರಕರಣ ನಡೆದಿದೆ. ಕಳೆದ ಕೆಲವು ವರ್ಷಗಳಿಂದ ರಸ್ತೆ ಹದಗೆಟ್ಟಿದ್ದರೂ ರಿಪೇರಿ ಮಾಡಿಸಿರಲಿಲ್ಲ. ಅಲ್ಲಿನ ಜಲ್ಲಿಯಿಂದಾಗಿ ಈ ಅವಘಡ ಸಂಭವಿಸಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೇವನಹಳ್ಳಿ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net