ದೀಪಿಕಾ ಪಡುಕೋಣೆಯನ್ನು ಟ್ರೋಲ್​ ಮಾಡಿದವರಿಗೆ ಖಡಕ್​ ರಿಪ್ಲೈ ಕೊಟ್ಟ ಖ್ಯಾತ ನಟಿ; ಪೋಸ್ಟ್​ ವೈರಲ್​

Untitled-design-2024-06-26T201513.890
Published on

ಮುಂಬೈ: ಇತ್ತೀಚೆಗೆ ದೀಪಿಕಾ ಪಡುಕೋಣೆ ಅವರು ಮುಂಬರುವ ಚಿತ್ರ ಕಲ್ಕಿ 2898 ADಯ ಪ್ರೀ-ರಿಲೀಸ್ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಈ ಸಮಾರಂಭದಲ್ಲಿ ದೀಪಿಕಾ ಪಡುಕೋಣೆ ಮೊದಲ ಬಾರಿಗೆ ಬೇಬಿ ಬಂಪ್​​ ತೋರಿಸಿರುವುದು ಕಂಡುಬಂದಿದೆ. ಕಾರ್ಯಕ್ರಮದಲ್ಲಿ ದೀಪಿಕಾ ಕಪ್ಪು ಬಣ್ಣದ ಬಾಡಿಕಾನ್ ಡ್ರೆಸ್ ಮತ್ತು ಹೈಹೀಲ್ಸ್ ಧರಿಸಿ ಕಾಣಿಸಿಕೊಂಡಿದ್ದರು. .

ಗರ್ಭಾವಸ್ಥೆಯಲ್ಲಿ ಹೀಲ್ಸ್ ಧರಿಸಿದ್ದಕ್ಕಾಗಿ ಹಲವರು ದೀಪಿಕಾ ಪಡುಕೋಣೆಯನ್ನು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಲು ಪ್ರಾರಂಭಿಸಿದರು. ಇನ್ನು ಕೆಲವರು ಈ ಸಮಯದಲ್ಲಿ ದೀಪಿಕಾ ಪೆನ್ಸಿಲ್ ಹೀಲ್ಸ್ ಧರಿಸಬಾರದಿತ್ತು. ಅದು ಮಗುವಿಗೆ ಹಾನಿ ಮಾಡುತ್ತದೆ ಎಂದ ಹೇಳಿದ್ದಾರೆ. ಅದರಲ್ಲಿ ದೀಪಿಕಾ ಅಭಿಮಾನಿಯೊಬ್ಬರು ರೀಲ್ಸ್​​ ಮಾಡಿ ದೀಪಿಕಾ ಪರ ಬ್ಯಾಟಿಂಗ್​ ಮಾಡಿದ್ದಾರೆ. ರೀಲ್ಸ್​​ನಲ್ಲಿ 'ದೀಪಿಕಾ ಏನು ಧರಿಸಬೇಕು ಎಂದು ಆಯ್ಕೆ ಮಾಡುವ ಸ್ವಾಯತ್ತತೆ ಅವರಿಗಿದೆ. ಅಪೇಕ್ಷಿತ ಫ್ಯಾಷನ್​ ಸಲಹೆ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ಇನ್ನು ಈ ಬಗ್ಗೆ ಬಿಟೌನ್​ ನಟಿ ರಿಚಾ ಚಡ್ಡಾ ಮಾತನಾಡಿ, ನಿಮಗೆ ಗರ್ಭಾಶಯವಿಲ್ಲದಿದ್ದರೆ ಅಭಿಪ್ರಾಯ ಹೇಳಬೇಡಿ (ನೋ ಯುಟರ್ಸ್, ನೋ ಗ್ಯಾನ್) ಎಂದಿದ್ದಾರೆ. ರಿಚಾ ಅವರು ದೀಪಿಕಾ ಅವರನ್ನು ಬೆಂಬಲಿಸಿದ್ದಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಿಚಾ ಚಡ್ಡಾ ಕೂಡ ಸದ್ಯ ಮೂರು ತಿಂಗಳ ಗರ್ಭಿಣಿಯಾಗಿದ್ದಾರೆ. ದೀಪಿಕಾ ನಟಿಸಿರುವ ಕಲ್ಕಿ 2898 AD ಜೂನ್​ 27ರಂದು ಬಿಡುಗಡೆಯಾಗಲಿದೆ. ಸಿನಿಮಾದಲ್ಲಿ ದೀಪಿಕಾ ಜತೆ ಪ್ರಭಾಸ್, ಅಮಿತಾಬ್ ಬಚ್ಚನ್, ಕಮಲ್​ಹಾಸನ್​ ಸಹ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇದಲ್ಲದೆ ದೀಪಿಕಾ ಅವರ ಸಿಂಗಮ್ ಎಗೇನ್​ನಲ್ಲಿ ಬಿಸಿ ಇದ್ದಾರೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net