ಕಳ್ಳನನ್ನೇ ಮದ್ವೆಯಾಗಿ ತನ್ನ ಕುಟುಂಬವನ್ನೇ ವಂಚಿಸಿದ ಮಹಿಳೆ! 12.8 ಕೋಟಿ ರೂ. ಪಂಗನಾಮ..Woman cheats relatives

Woman Elope
Published on

ಚೀನಾ: ( Woman cheats relatives  ) ಹಣ ಮಾಡುವ ಉದ್ದೇಶದಿಂದ ಮಹಿಳೆಯೊಬ್ಬಳು ಗಂಡನ ಜತೆ ಸೇರಿ ಸಂಬಂಧಿಕರಿಗೆ ಕೋಟಿ.. ಕೋಟಿ ಹಣವನ್ನು ವಂಚನೆ ಮಾಡಿ ಸಿಕ್ಕಿ ಬಿದ್ದು ಜೈಲು ಸೇರಿರುವ ಘಟನೆ ಚೀನಾದಲ್ಲಿ ನಡೆದಿದೆ.

ಮಾಂಗ್ (40) ಎಂಬ ಚೀನಾದ ಮಹಿಳೆ ಸಣ್ಣ ರಿಯಲ್ ಎಸ್ಟೇಟ್ ಏಜೆನ್ಸಿಯನ್ನು ನಡೆಸುತ್ತಿದ್ದಳು. ಆದರೆ ಈ ಕೆಲಸ ಇವಳ ಕೈ ಹಿಡಿದಿಲ್ಲ. ಹೀಗಾಗಿ ಏನಾದ್ರೂ ಕೆಲಸ ಮಾಡಿ ಹಣ ಸಂಪಾದಿಸಲು ಬಯಸಿದ್ದಳು, ತನ್ನ ಕುಟುಂಬವನ್ನು ವಂಚಿಸಿದರೂ ಸಹ ಹಣ ಸಂಪಾದನೆ ಮಾಡಬಹುದು ಎಂದು ಅರಿತ ಈಕೆ ಮಾಸ್ಟರ್​ ಪ್ಲ್ಯಾನ್​ ಮಾಡಿ ಸಿಕ್ಕಿ ಬಿದ್ದಿದ್ದಾಳೆ.

ಜಿಯಾಂಗ್ ಎಂಬ ಕಾರು ಚಾಲಕನನ್ನು ನೋಡಿದಳು. ಆತನ ಬಳಿ  ಒಂದು ಕಥೆ ಕಟ್ಟಿದ್ದಾಳೆ.  ವಯಸ್ಸಿನ ಕಾರಣದಿಂದಾಗಿ ಆಕೆಯ ಪೋಷಕರು ಮದುವೆಯಾಗುವಂತೆ ಒತ್ತಡ ಹೇರುತ್ತಿದ್ದಾರೆ ಎಂದು ಹೇಳಿ, ಆಕೆ ಜಿಯಾಂಗ್‌ಗೆ ಮದುವೆ ಏರ್ಪಡಿಸಿದಳು. ಇದಕ್ಕೆ ಈತ ಕೂಡಾ ಒಪ್ಪಿದನು. ಇಬ್ಬರು ಕೂಡಾ ಮದ್ವೆ ಆದರು. ಮಾಂಗ್ ತನ್ನ ಕುಟುಂಬಕ್ಕೆ ಚಾಲಕ ಜಿಯಾಂಗ್‌ನನ್ನು ರಿಯಲ್ ಎಸ್ಟೇಟ್ ಉದ್ಯಮಿ ಎಂದು ಪರಿಚಯಿಸಿದಳು. ಜಿಯಾಂಗ್ ದೇಶದಲ್ಲಿನ ಅನೇಕ ದೊಡ್ಡ ಮೂಲಸೌಕರ್ಯ ಯೋಜನೆಗಳ ಯೋಜನೆಗಳ ಭಾಗವಾಗಿದ್ದಾರೆ. ಕಡಿಮೆ ಬೆಲೆಗೆ ಭೂಮಿ ಮತ್ತು ಆಸ್ತಿಗಳನ್ನು ಖರೀದಿಸಬಹುದು ಎಂದು ಹೇಳಿ ನಂಬಿಸಿದ್ದಾರೆ. ಸುತ್ತಮುತ್ತಲಿನವ ನಂಬಿಕೆ ಗಳಿಸಲು  ಮಾಂಗ್  ಒಂದು ಸಣ್ಣ ಫ್ಲಾಟ್ ಅನ್ನು ನೀಡಿದ. ಅವಳು ಆ ಫ್ಲಾಟ್ ಅನ್ನು 1.2 ಕೋಟಿ ರೂ.ಗೆ ಖರೀದಿಸಿ ತನ್ನ ಸಹೋದರಿಗೆ ಅರ್ಧ ಬೆಲೆಗೆ ಮಾರಿದಳು. ನಂತರ, ಮಾಂಗ್ ತನ್ನ ತಂಗಿ ಮತ್ತು ಸಂಬಂಧಿಕರಿಗೆ ಜಿಯಾಂಗ್ ಜೊತೆಗಿನ ಸಂಪರ್ಕದಿಂದಾಗಿ ಉತ್ತಮ ಬೆಲೆಗೆ ಆಸ್ತಿ ಖರೀದಿಸಿದ್ದಾರೆ ಎಂದು ಸುಳ್ಳು ಹೇಳಿದಳು.

ತನ್ನ ಪ್ರಸ್ತಾಪವನ್ನು ಹೆಚ್ಚು ನಂಬಲರ್ಹವಾಗಿಸಲು, ಅವಳು ಇತರ ಸಂಬಂಧಿಕರನ್ನು ಹೊಸ ವಸತಿ ಕಟ್ಟಡಳಿಗೆ ಕರೆದೊಯ್ದಳು ಮತ್ತು ಅವುಗಳನ್ನು ಕಡಿಮೆ ಬೆಲೆಗೆ ಖರೀದಿ ಮಾಡಬಹುದೆಂದು ಹೇಳಿದಳು. ಮಾಂಗ್ ನ ಯೋಜನೆಯನ್ನು ನಂಬಿದ ಸಂಬಂಧಿಕರು ಅವಳಿಗೆ ದೊಡ್ಡ ಮೊತ್ತದ ಹಣವನ್ನು ನೀಡಿದರು. ಆ ಫ್ಲಾಟ್‌ಗಳನ್ನು ಖರೀದಿಸಲು, ಕೆಲವರು ತಮ್ಮಲ್ಲಿರುವ ಫ್ಲಾಟ್‌ಗಳನ್ನು ಸಹ ಮಾರಿ ಉತ್ತಮ ಆಸ್ತಿಗೆ ಸ್ಥಳಾಂತರಗೊಳ್ಳುವ ಆಶಯವನ್ನು ಹೊಂದಿದ್ದರು. ಅವಳು ಸಂಬಂಧಿಕರಿಗೆ ಬಾಡಿಗೆ ಫ್ಲಾಟ್‌ಗಳನ್ನು ನೀಡಿ ಅವು ಖರೀದಿಸಿದ ಆಸ್ತಿಗಳೆಂದು ಸುಳ್ಳು ಹೇಳಿದಳು. ಆಕೆಯ ಸಂಬಂಧಿಕರೊಬ್ಬರು ಮೂಲ ಡೆವಲಪರ್ ಅನ್ನು ಸಂಪರ್ಕಿಸಿದಾಗ, ಸತ್ಯ ಹೊರಬಂದಿತು. ತಾನು ಹಣದಿಂದ ಖರೀದಿಸಿದ ಫ್ಲಾಟ್ ವಾಸ್ತವವಾಗಿ ತನ್ನ ಹೆಸರಿನಲ್ಲಿಲ್ಲ ಎಂದು ಅರಿತುಕೊಂಡರು ಮತ್ತು ಮಾಂಗ್ ತನಗೆ ಮೋಸ ಮಾಡಿದ್ದಾರೆಂದು  ಅರಿತುಕೊಂಡರು.

ಪೊಲೀಸರು ಆಕೆಯನ್ನು ಬಂಧಿಸಿದಾಗ, 12.8 ಕೋಟಿ ರೂ. ಮಹಿಳೆ ವಂಚಿಸಿದ್ದಳು. ನ್ಯಾಯಾಲಯವು ಆಕೆಗೆ 12 ವರ್ಷ 6 ತಿಂಗಳು ಜೈಲು ಶಿಕ್ಷೆ ವಿಧಿಸಿತು. ನಕಲಿ ಪತಿ ಜಿಯಾಂಗ್‌ಗೆ ಆರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು, ಮತ್ತು ಇತರ ಸಂಬಂಧಿಕರ ಮುಂದೆ ಸುಳ್ಳು ಹೇಳಿದ ಆಕೆಯ ತಂಗಿಗೆ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net