ಆಹ್ವಾನವಿಲ್ಲದೆ ಮದುವೆಗೆ ಬಂದ ಘೇಂಡಾಮೃಗ! ಭಯಭೀತರಾದ ಜನ ಮಾಡಿದ್ದೇನು? Rhino

Rhino
Published on

Rhino: ನಾವು ಮದುವೆ ಸಮಾರಂಭದಲ್ಲಿ ಸಾಮಾನ್ಯವಾಗಿ ನಾಯಿ ಅಥವಾ ಬೆಕ್ಕುಗಳಂತಹ ಸಾಕುಪ್ರಾಣಿಗಳನ್ನು ತರುವುದನ್ನು ನೋಡಿರುತ್ತೇವೆ. ಆದರೆ ಆಹ್ವಾನಿಸದೆಯೇ ಕಾಡು ಘೇಂಡಾಮೃಗವೊಂದು ಮದುವೆ ಮನೆಯಲ್ಲಿ ಕಾಣಿಸಿಕೊಂಡರೆ ಅಲ್ಲಿನ ಜನರ ಗತಿಯೇನು? ಎಂದು ಊಹಿಸಿಕೊಳ್ಳಲು ಸಾಧ್ಯವಿಲ್ಲ. ದಿಕ್ಕಾಪಾಲಾಗಿ ಪ್ರಾಣ ಉಳಿಸಿಕೊಳ್ಳಲು ಓಡುವುದಂತೂ ಖಂಡಿತ! ಆದರೆ ಇಂತಹ ಘಟನೆಗಳು ನಿಜವಾಗಿಯೂ ನಡೆಯಲು ಸಾಧ್ಯವೇ? ಹೌದು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆದ ವಿಡಿಯೋ ಒಂದರಲ್ಲಿ ಘೇಂಡಾಮೃಗವೊಂದು ಮದುವೆಗೆ ಆಗಮಿಸಿದೆ. ಹಾಗಾದ್ರೆ ಅದು ಎಲ್ಲಿ? ನಂತರ ಅಲ್ಲಿ ನಡೆದಿದ್ದೇನು ಎನ್ನುವ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ.

ನೇಪಾಳದ ಚಿಟ್ವಾನ್ ರಾಷ್ಟ್ರೀಯ ಉದ್ಯಾನವನದಲ್ಲಿ ನಡೆದ ಮದುವೆ ಕಾರ್ಯಕ್ರಮಕ್ಕೆ ಖಡ್ಗಮೃಗವೊಂದು ಆಕಸ್ಮಿಕವಾಗಿ ನುಗ್ಗುದೆ. ಅನಿರೀಕ್ಷಿತವಾಗಿ ಬಂದ ಅತಿಥಿಯನ್ನು ಕಂಡು ಅಲ್ಲಿ ನೆರೆದ ಜನರು ಆಶ್ಚರ್ಯಚಕಿತರಾಗಿ ನೋಡುತ್ತಾ ನಿಂತು, ನಿಧಾನವಾಗಿ ಆಚರಣೆಯೊಳಗೆ ಹೆಜ್ಜೆ ಹಾಕಿದರು. ಬಂದ ಘೇಂಡಾಮೃಗವು ವಧು-ವರರನ್ನು ಹುಡುಕುತ್ತಿದೆಯೇ? ಅಥವಾ ಜನಸಂದಣಿಯಿಂದ ಆಕರ್ಷಿತವಾಗಿದೆಯೇ? ಎಂದು ಯಾರಿಗೂ ತಿಳಿದಿಲ್ಲ.

ಈ ವೈರಲ್ ವಿಡಿಯೋವನ್ನು ಹಲವಾರು ಬಳಕೆದಾರರು ಹಂಚಿಕೊಂಡಿದ್ದಾರೆ, ಈ ವೈರಲ್​​ ವಿಡಿಯೋಗೆ ಒಬ್ಬ ನೆಟ್ಟಿಗ,"ಘೇಂಡಾಮೃಗವು ದಂಪತಿಗಳಿಗೆ ಆಶೀರ್ವಾದ ನೀಡಲು ಬಯಸುತ್ತದೆ" ಎಂದು ಬರೆದರೆ, ಇನ್ನೊಬ್ಬರು, "ಸಹೋದರ ಮದುವೆಯಲ್ಲಿ ವೈಲ್ಡ್ ಕಾರ್ಡ್ ಪಡೆದರು" ಎಂದು ವ್ಯಂಗ್ಯವಾಡಿದ್ದಾರೆ.

ಕುತೂಹಲಕಾರಿಯಾಗಿ, ನೇಪಾಳದಲ್ಲಿ ಖಡ್ಗಮೃಗವೊಂದು ಸಾರ್ವಜನಿಕ ಸ್ಥಳಗಳಲ್ಲಿ ಅಲೆದಾಡುತ್ತಿರುವುದು ಇದೇ ಮೊದಲಲ್ಲ. ಚಿಟ್ವಾನ್‌ನ ಎಟಿಎಂ ಒಳಗೆ ಸೇರಿದಂತೆ ಅಸಾಮಾನ್ಯ ಸ್ಥಳಗಳಲ್ಲಿ ಖಡ್ಗಮೃಗಗಳು ಕಾಣಿಸಿಕೊಂಡಿತ್ತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net