ತಾಲೂಕು ಕಚೇರಿಗೆ ಕಂದಾಯ ಸಚಿವರ ದಿಢೀರ್ ಬೇಟಿ

840adbb1-84cf-43d3-b012-037475fc4159-1.jpg
Published on

ಚನ್ನಪಟ್ಟಣ

ಚನ್ನಪಟ್ಟಣ ತಾಲೂಕು ಕಚೇರಿಯಲ್ಲಿ ಭ್ರಷ್ಟಾಚಾರ ಆರೋಪದ ಹಿನ್ನೆಲೆಯಲ್ಲಿ ಕಂದಾಯ ಸಚಿವ ಕೃಷ್ಣಭೈರೇಗೌಡ ಶುಕ್ರವಾರ ಕಚೇರಿಗೆ ದಿಢೀರ್ ಭೇಟಿ ನೀಡಿದರು.

ಯಾರಿಗೂ ಮಾಹಿತಿ ಕೊಡದೇ ಭೇಟಿ ಕೊಟ್ಟು ಅಧಿಕಾರಿ ವರ್ಗಕ್ಕೆ ಶಾಕ್ ಕೊಟ್ಟಿದ್ದಾರೆ. ಕಚೇರಿಯ ಅವ್ಯವಸ್ಥೆ ಕಂಡು ತಹಸೀಲ್ದಾರ್ ನರಸಿಂಹಮೂರ್ತಿ ಗೆ ತರಾಟೆ ಪಡೆದಿದ್ದಾರೆ. ಈ ವೇಳೆ ಸಚಿವರನ್ನು ಕಂಡ ಸಾರ್ವಜನಿಕರು ದೂರುಗಳ ಸುರಿಮಳೆ ಸುರಿಸಿದರು. ಕೆಲಸಕಾರ್ಯಗಳಿಗೆ ಅಲೆದಾಡಿಸುತ್ತಾರೆ ಎಂದು ಕೆಲವರು ಕಣ್ಣೀರಿಟ್ಟು ದೂರು ಕೊಟ್ಟಿದ್ದು ಕಂಡುಬಂದಿತು. ಕಚೇರಿಯಲ್ಲಿ ಎಲ್ಲವೂ ಭ್ರಷ್ಟಾಚಾರ ಎಂದು ಆರೋಪಿಸಿದರು‌‌‌‌.

ಕಚೇರಿಯ ಕಡತಗಳನ್ನ ಪರಿಶೀಲನೆ ಮಾಡಿದ ಸಚಿವರು, ಎಲ್ಲದರಲ್ಲಿಯೂ ವ್ಯತ್ಯಾಸ ಕಂಡ ಹಿನ್ನೆಲೆಯಲ್ಲಿ ತಹಶೀಲ್ದಾರ್ ನರಸಿಂಹಮೂರ್ತಿ ಗೆ ಹಿಗ್ಗಾಮುಗ್ಗಾ ತರಾಟೆ ಪಡೆದರು‌‌. ಇದು ತಾಲೂಕು ಕಚೇರಿನಾ ? ಕಸದ ಕಚೇರಿನಾ ? ಎಂದು ಪ್ರಶ್ನಿಸಿದ ಅವರು, ತಾಲೂಕು ಕಚೇರಿ ಒಳಗೆಯೇ ಕಸದ ರಾಶಿ ಕಂಡು ಸಿಟ್ಟಿಗೆದ್ದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ನಿಜಕ್ಕೂ ಬೇಸರ ತರಿಸಿದೆ. ನಮ್ಮ ಇಲಾಖೆಯಲ್ಲಿ ಈ ರೀತಿ ಆಗುತ್ತಿದೆ. ಇದು ನನ್ನದೇ ತಪ್ಪು ಎಂದು ಹೇಳುತ್ತೇನೆ, ಬೇರೆ ಯಾರಿಗೂ ದೋಷ ಕೊಡಲ್ಲ.


ಮುಂದಿನ ದಿನಗಳಲ್ಲಿ ಈ ಸಮಸ್ಯೆ ಬಗೆಹರಿಸುತ್ತೇನೆ. ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ, ಇದು ಸರ್ಕಾರದ ಕೆಲಸ ಎಂದು ಅಂದುಕೊಂಡಿಲ್ಲ, ಬೇಕಾಬಿಟ್ಟಿ ಕೆಲಸ ಮಾಡುತ್ತಿದ್ದಾರೆ, ಇದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net