ಅದೇ ಕೊನೇ ಊಟ, ಕೊನೆಯ ಕೂಟ; ತಹಸೀಲ್ದಾರ್​ ಕಚೇರಿ ಆಯೋಜಿಸಿದ್ದ ಪಾರ್ಟಿಯಲ್ಲಿ ನೌಕರನ ಸಾವು

Death
Published on

ಕೊಪ್ಪಳ: ತಹಸೀಲ್ದಾರ್​ ಕಚೇರಿಯೊಂದು ಆಯೋಜಿಸಿದ್ದ ವಾರ್ಷಿಕ ಕ್ರೀಡಾಕೂಟದಲ್ಲಿ ಸಂಭ್ರಮದ ಬೆನ್ನಿಗೇ ಶೋಕ ಆವರಿಸಿದೆ. ಮಾತ್ರವಲ್ಲ, ಅಲ್ಲಿನ ನೌಕರನೊಬ್ಬನ ಪಾಲಿಗೆ ಅದೇ ಕೊನೇ ಊಟ, ಕೊನೆಯ ಕೂಟ ಎಂಬಂತಾಗಿದೆ.

ಕೊಪ್ಪಳ ತಾಲೂಕಿನ ಬಸಾಪುರ ಗ್ರಾಮದ ಬಳಿ ಇರುವ ರೆಸಾರ್ಟ್​ವೊಂದರಲ್ಲಿ ಈ ದುರಂತ ಸಂಭವಿಸಿದೆ. ಕೊಪ್ಪಳ ತಹಸೀಲ್ದಾರ ಕಚೇರಿ ವತಿಯಿಂದ ಇಲ್ಲಿ ವಾರ್ಷಿಕ ಕೂಟ ಹಮ್ಮಿಕೊಳ್ಳಲಾಗಿತ್ತು. ಇದಕ್ಕೆ ಹಾಜರಾಗಿದ್ದ ಕಂದಾಯ ಇಲಾಖೆಯ ಎಸ್​ಡಿಎ, ರಾಯಚೂರು ಮೂಲದ ತಾಯಪ್ಪ (26) ಎಂಬಾತ ಸಾವಿಗೀಡಾಗಿದ್ದಾನೆ.

ತಹಸೀಲ್ದಾರ್ ಕಚೇರಿ ವತಿಯಿಂದ ಭಾನುವಾರ ಇಲ್ಲಿ ವಾರ್ಷಿಕ ಕ್ರೀಡಾಕೂಟದ ಸಲುವಾಗಿ ಸಂತೋಷ ಕೂಟ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಊಟ ಮುಗಿದ ಬಳಿಕ ಸ್ವಿಮ್ಮಿಂಗ್​ಪೂಲ್​ಗೆ ಬಿದ್ದು ತಾಯಪ್ಪ ಸಾವಿಗೀಡಾಗಿದ್ದಾನೆ.

ತಾಯಪ್ಪ ಕೊಪ್ಪಳದಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದ. ಪತಿಯ ಸಾವಿನಿಂದ ಪತ್ನಿ ದಿಗ್ಭ್ರಾಂತಳಾಗಿದ್ದು, ಕೊಪ್ಪಳ ಜಿಲ್ಲೆ ಮುನಿರಾಬಾದ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ವೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net