ಶಬರಿಮಲೆ ರೂ.200 ಕೋಟಿಗೂ ಅಧಿಕ ಆದಾಯ; 39 ದಿನಗಳಲ್ಲಿ ಈ ಮೊತ್ತ ಸಂಗ್ರಹ

sabarimala
Published on

ತಿರುವನಂತಪುರಂ: ಎರಡು ತಿಂಗಳ ವಾರ್ಷಿಕ ತೀರ್ಥಯಾತ್ರೆಯ ಮೊದಲ ಹಂತವು ಮಂಗಳಕರ ಮಂಡಲ ಪೂಜೆಯೊಂದಿಗೆ ಬುಧವಾರ ಮುಕ್ತಾಯಗೊಳ್ಳಲಿದೆ. ಶಬರಿಮಲೆಯಲ್ಲಿ ಆದಾಯ ಸಂಗ್ರಹವು 200 ಕೋಟಿ ರೂ. ದಾಟಿದೆ. ಕಳೆದ 39 ದಿನಗಳಲ್ಲಿ ದೇವಸ್ಥಾನಕ್ಕೆ 204.30 ಕೋಟಿ ರೂ. ಆದಾಯ ಬಂದಿದೆ ಎಂದು ಅಯ್ಯಪ್ಪ ದೇಗುಲವನ್ನು ನಿರ್ವಹಿಸುವ ಉನ್ನತ ಸಂಸ್ಥೆಯಾದ ತಿರುವಾಂಕೂರು ದೇವಸ್ವಂ ಬೋರ್ಡ್​ (ಟಿಡಿಬಿ) ತಿಳಿಸಿದೆ.

ಡಿ. 25ರಂದು ನಡೆದ ಎಣಿಕೆ ಪ್ರಕಾರ ಕಳೆದ 39 ದಿನಗಳಲ್ಲಿ 204.30 ಕೋಟಿ ರೂ. ಸಂಗ್ರಹವಾಗಿದೆ. ಭಕ್ತರು ಅರ್ಪಿಸಿದ ಕಾಣಿಕೆಯಿಂದ ಇದುವರೆಗೆ 63.89 ಕೋಟಿ ರೂ., ಅರಾವಣ ಪ್ರಸಾದ ಮಾರಾಟದಿಂದ 96.32 ಕೋಟಿ ರೂ., ಅಪ್ಪಂ ಪ್ರಸಾದ ಮಾರಾಟದಿಂದ 12.38 ಕೋಟಿ ರೂ. ಸಂಗ್ರಹವಾಗಿದೆ ಟಿಡಿಬಿ ಅಧ್ಯ ಪಿಎಸ್​ ಪ್ರಶಾಂತ್​ ಮಾಹಿತಿ ನೀಡಿದ್ದಾರೆ.

ಡಿ.30ರಿಂದ ಜ. 15ರವರೆಗೆ ದರ್ಶನ

ಮಂಡಲ ಪೂಜೆ ವೇಳೆ ಡಿ.25ರವರೆಗೆ ಸುಮಾರು 31,43,163 ಭಕ್ತರು ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ 7,25,049 ಜನರಿಗೆ 'ಅನ್ನದಾನ ಮಂಡಲಂ' ಉಚಿತ ಆಹಾರ ನೀಡಿದೆ. ಎರಡು ತಿಂಗಳ ಮಂಡಲ ಪೂಜೆ ದೀಪಾ ಅವಧಿ ಬುಧವಾರ ಕೊನೆಗೊಳ್ಳಲಿದೆ. ಬುಧವಾರ ರಾತ್ರಿ 11 ಗಂಟೆಗೆ ದೇವಸ್ಥಾನ ಮುಚ್ಚಲಾಗುತ್ತದೆ. ಡಿ.30ರಂದು ಮಕರವಿಳಕ್ಕು ಉತ್ಸವಕ್ಕಾಗಿ ದೇವಸ್ಥಾನ (ಶಬರಿಮಲೆ) ಮತ್ತೆ ತೆರೆಯಲಾಗುತ್ತದೆ. ಜ.15ರವರೆಗೆ ದೇವಸ್ಥಾನ ತೆರೆದಿರುತ್ತದೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net