

ಮುಂಬೈ: ಬಾಲಿವುಡ್ ಇಂಡಸ್ಟ್ರಿಯಲ್ಲಿ ನಂಬರ್ ಒನ್ ಸ್ಥಾನಕ್ಕೆ ಪೈಪೋಟಿ ನಡೆಸುವ ನಾಯಕಿಯರಲ್ಲಿ ಕತ್ರಿನಾ ಕೈಫ್ ಮುಂಚೂಣಿಯಲ್ಲಿದ್ದಾರೆ. ಗ್ಲಾಮರ್ ಪಾತ್ರಗಳ ಜತೆಗೆ ಆ್ಯಕ್ಷನ್ ಪಾತ್ರಗಳನ್ನೂ ಮಾಡುತ್ತಾ ಸೂಪರ್ ಸ್ಟಾರ್ ಇಮೇಜನ್ನೇ ಟಾರ್ಗೆಟ್ ಮಾಡಿಕೊಂಡಿರುವ ಚೆಲುವೆ ಕತ್ರಿನಾ ಕೈಫ್.
ಟಾಪ್ ಸ್ಟಾರ್ ಚಿತ್ರಗಳಲ್ಲಿ ನಟಿಸಿ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಈಕೆ ತಮ್ಮ ವೈಯಕ್ತಿಕ ಕಾಳಜಿ ಹಾಗೂ ಭದ್ರತೆಗೆ ಹೆಚ್ಚು ಖರ್ಚು ಮಾಡುತ್ತಾರೆ. ಆಯ್ಕೆ ಮಾಡುವ ಪಾತ್ರಗಳ ವಿಷಯದಲ್ಲಿ ಕತ್ರಿನಾ ಹೆಚ್ಚಾಗಿ ಹೊರಾಂಗಣ ಚಿತ್ರೀಕರಣದಲ್ಲಿ ಭಾಗವಹಿಸಬೇಕಾಗುತ್ತದೆ. ಅದಕ್ಕಾಗಿಯೇ ಈ ಚೆಲುವೆ ತನ್ನ ಭದ್ರತೆಗೆ ಹೆಚ್ಚು ಖರ್ಚು ಮಾಡುತ್ತಾರೆ.
ಇತ್ತೀಚೆಗಷ್ಟೇ ವಿಕ್ಕಿ ಕೌಶಲ್ ರನ್ನು ಮದುವೆಯಾಗಿರುವ ಈ ಚೆಲುವೆ ಮದುವೆಯ ನಂತರವೂ ಬ್ರೇಕ್ ತೆಗೆದುಕೊಳ್ಳದೇ ಸಿನಿಮಾಗಳನ್ನು ಮುಂದುವರೆಸುತ್ತಿದ್ದಾರೆ. ಇದೀಗ ತಮ್ಮ ಅಂಗರಕ್ಷಕನಿಗೆ ಒಂದು ಕೋಟಿ ರೂಪಾಯಿ ಸಂಭಾವನೆ ನೀಡುವ ಮಟ್ಟಕ್ಕೆ ಬಂದಿರುವುದು ದೊಡ್ಡ ಸಾಧನೆ ಎನ್ನುತ್ತಾರೆ ಇಂಡಸ್ಟ್ರಿ ಮಂದಿ.
ದೀಪಕ್ ಸಿಂಗ್ ಸಂಭಾವನೆ ವರ್ಷಕ್ಕೆ ಒಂದು ಕೋಟಿ ರೂಪಾಯಿಗೂ ಹೆಚ್ಚು ಎನ್ನುತ್ತವೆ ಬಾಲಿವುಡ್ ಚಿತ್ರ ಮೂಲಗಳು. ಶಾರುಖ್, ಸಲ್ಮಾನ್ ರಂತಹ ಸ್ಟಾರ್ಗಳ ಸೆಕ್ಯುರಿಟಿಗೆ ನೀಡುವ ಸಂಭಾವನೆಗೆ ಹೋಲಿಸಿದರೆ ಇದು ಕಡಿಮೆ ಮೊತ್ತವೇ ಆಗಿದ್ದರೂ, ನಾಯಕಿಯೊಬ್ಬರು ತಮ್ಮ ಭದ್ರತೆಗಾಗಿ ಈ ರೇಂಜ್ನಲ್ಲಿ ಖರ್ಚು ಮಾಡುತ್ತಿರುವುದು ಹಾಟ್ ಟಾಪಿಕ್ ಆಗುತ್ತಿದೆ.
ಬಹಳ ದಿನಗಳಿಂದ ದೀಪಕ್ ಸಿಂಗ್ ಎಂಬ ವ್ಯಕ್ತಿ ಕತ್ರಿನಾ ಕೈಫ್ ಅವರ ವೈಯಕ್ತಿಕ ಭದ್ರತೆಯನ್ನು ನೋಡಿಕೊಳ್ಳುತ್ತಿದ್ದಾರೆ. ತನ್ನನ್ನು ಹೀಗೆ ನೋಡಿಕೊಳ್ಳುತ್ತಿರುವ ದೀಪಕ್ ಗೆ ಕತ್ರಿನಾ ಭಾರೀ ಸಂಭಾವನೆ ನೀಡುತ್ತಿದ್ದಾರೆ.
ಕತ್ರಿನಾ ಪ್ರಸ್ತುತ ಟೈಗರ್ 3 ಮತ್ತು ಮೇರಿ ಕ್ರಿಸ್ಮಸ್ ಸಿನಿಮಾಗಳ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ನಿರತರಾಗಿದ್ದಾರೆ. ದೀಪಾವಳಿ ಬಿಡುಗಡೆಗೆ ಸಿದ್ಧವಾಗುತ್ತಿರುವ ಟೈಗರ್ 3 ಚಿತ್ರದಲ್ಲಿ ಅವರು ಪಾಕಿಸ್ತಾನಿ ಏಜೆಂಟ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಅವರು ಸಲ್ಮಾನ್ ಎದುರು ಸಾಹಸ ದೃಶ್ಯಗಳಲ್ಲಿ ನಟಿಸಿದ್ದಾರೆ. ಕತ್ರಿನಾ ಮೊದಲ ಬಾರಿಗೆ ಕಾಲಿವುಡ್ ಸ್ಟಾರ್ ಹೀರೋ ವಿಜಯ್ ಸೇತುಪತಿ ಜತೆ ಮೇರಿ ಕ್ರಿಸ್ಮಸ್ ಚಿತ್ರದಲ್ಲಿ ತೆರೆ ಹಂಚಿಕೊಳ್ಳುತ್ತಿದ್ದಾರೆ.