

ಬೆಂಗಳೂರು: ಮಾಜಿ ಸಚಿವ ಎಚ್.ಎಂ. ರೇವಣ್ಣ ಅವರ ಕುಟುಂಬದ ಮೇಲೂ ಕರೊನಾ ಕಾರ್ಮೋಡ ಕವಿದಿದೆ.
ನಿನ್ನೆ ರಾತ್ರಿ(ಮಂಗಳವಾರ) ಎಚ್.ಎಂ. ರೇವಣ್ಣ ಅವರ ಪತ್ನಿಯ ಕಿರಿಯ ಸಹೋದರಿ ಕೋವಿಡ್ ಸೋಂಕಿಗೆ ಬಲಿಯಾಗಿದ್ದು, ಕುಟುಂಬಸ್ಥರಲ್ಲಿ ದುಃಖ ಮಡುಗಟ್ಟಿದೆ. ಅದರ ಜತೆಗೆ ಸೋಂಕಿನ ಭೀತಿಯೂ ಆವರಿಸಿದೆ.
ರೇವಣ್ಣ ಅವರ ಪತ್ನಿಯ ಸಹೋದರಿ ಎಂ.ಎಸ್ ರೋಹಿಣಿಗೆ ಇತ್ತೀಚೆಗೆ ಕರೊನಾ ಸೋಂಕು ದೃಢಪಟ್ಟಿತ್ತು. ಕೂಡಲೇ ನಾದಿನಿಯನ್ನು ಸ್ವತಃ ರೇವಣ್ಣ ಅವರೇ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದರು. ಚಿಕಿತ್ಸೆ ಫಲಿಸದೆ 61 ವರ್ಷದ ರೋಹಿಣಿ ಮೃತಪಟ್ಟಿದ್ದಾರೆ.
ರೋಹಿಣಿ ಜತೆ ಪ್ರಾಥಮಿಕ ಸಂಪರ್ಕ ಹೊಂದಿದ್ದರಿಂದ ರೇವಣ್ಣ ಹಾಗೂ ಅವರ ಪುತ್ರ ಕ್ವಾರಂಟೈನ್ ಮನೆಯಲ್ಲೇ ಕ್ವಾರಂಟೈನ್ಗೆ ಒಳಪಟ್ಟಿದ್ದಾರೆ. ಈ ಬಗ್ಗೆ ರೇವಣ್ಣ ತನ್ನ ಫೇಸ್ಬುಕ್ ಖಾತೆಯಲ್ಲಿ ಹೇಳಿಕೊಂಡಿದ್ದಾರೆ.