ರೇವಾ ಪಿಯು ಕಾಲೇಜಿಗೆ ಬಾಸ್ಕೆಟ್​ಬಾಲ್​ ಪ್ರಶಸ್ತಿ

ರೇವಾ ಪಿಯು ಕಾಲೇಜಿಗೆ ಬಾಸ್ಕೆಟ್​ಬಾಲ್​ ಪ್ರಶಸ್ತಿ
ರೇವಾ ಪಿಯು ಕಾಲೇಜಿಗೆ ಬಾಸ್ಕೆಟ್​ಬಾಲ್​ ಪ್ರಶಸ್ತಿ
Published on

ಬೆಂಗಳೂರಿನ ರೇವಾ ಇಂಡಿಪೆಂಡೆಂಟ್​ ಪಿಯು ಕಾಲೇಜಿನ (REVA Independent PU College) ಬಾಲಕಿಯರ ಬಾಸ್ಕೆಟ್​ಬಾಲ್​ ತಂಡ ಇತ್ತೀಚೆಗೆ ನಡೆದ ಪದವಿ ಪೂರ್ವ ಜಿಲ್ಲಾ ಮಟ್ಟದ ಬಾಸ್ಕೆಟ್​ಬಾಲ್ (Basketball)​ ಟೂರ್ನಿಯಲ್ಲಿ ಚಾಂಪಿಯನ್​ ಆಗಿ ಹೊರಹೊಮ್ಮಿದೆ. ರೇವಾ ಇಂಡಿಪೆಂಡೆಂಟ್​ ಪಿಯು ಕಾಲೇಜು ತಂಡ ಫೈನಲ್​ ಪಂದ್ಯದಲ್ಲಿ ಸೇಂಟ್​ ಕ್ಲಾರೆಟ್​ ಪಿಯು ಕಾಲೇಜು ತಂಡವನ್ನು 38-26 ಅಂತರದಿಂದ ಮಣಿಸಿ ರಾಜ್ಯಮಟ್ಟದ ಟೂರ್ನಿಗೆ ಅರ್ಹತೆ ಸಂಪಾದಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net