ಬೆಂಗಳೂರು:
ಕೃಷಿ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆಯಲ್ಲಿ ಇಂಜಿನಿಯರಿಂಗ್ ಪದ್ಧತಿಗಳು ಸುಸ್ಥಿರ ಕ್ರಾಂತಿಯ ಮುಂಚೂಣಿಯಲ್ಲಿವೆ. ಹವಾಮಾನ ಬದಲಾವಣೆ, ಸಂಪನ್ಮೂಲ ಕೊರತೆ, ಹೆಚ್ಚುತ್ತಿರುವ ಜನಸಂಖ್ಯೆ ಸೇರಿ ಜಗತ್ತು ಎದುರಿಸುತ್ತಿರುವ ಸವಾಲುಗಳ ನಡುವೆ ಕೃಷಿಯಲ್ಲಿ ನವೀನ ಪರಿಹಾರ ಮಾರ್ಗಗಳನ್ನು ಕಂಡುಕೊಳ್ಳುವ ಅಗತ್ಯವಿದೆ. ಈ ನಿಟ್ಟಿನಲ್ಲಿ ರೇವಾ ವಿಶ್ವವಿದ್ಯಾಲಯ ಅಗ್ರಿಕಲ್ಚರ್ ಇಂಜಿನಿಯರಿಂಗ್‌ನಲ್ಲಿ ಬಿ.ಟೆಕ್ ಕೋರ್ಸ್ ಆರಂಭಿಸಿದೆ.
ಇದರ ಮೂಲಕ ಸುಸ್ಥಿರತೆಗೆ ಪೂರಕವಾಗಿ ಬೇಕಾದಂಥ ಇತ್ತೀಚಿನ ತಂತ್ರಜ್ಞಾನಗಳು ಮತ್ತು ವಿವಿಧ ಉಪಕ್ರಮಗಳನ್ನು . ಇಂಜಿನಿಯರಿಂಗ್ ಮತ್ತು ಮೌಲ್ಯವರ್ಧಿತ ತಂತ್ರಜ್ಞಾನಗಳನ್ನು ಸಂಯೋಜನೆ ಮಾಡುವ ಮೂಲಕವಾಗಿ ಆಹಾರ ವಲಯಕ್ಕೆ ಸಮಗ್ರ ವಿಧಾನವೊಂದನ್ನು ನೀಡುವ ಉದ್ದೇಶದೊಂದಿಗೆ ಸಂಸ್ಥೆ ಈ ಕೋರ್ಸ್ ಪ್ರಾರಂಭಿಸಿದೆ. ಈ ಮೂಲಕ ವಿದ್ಯಾರ್ಥಿಗಳಿಗೆ ಸಂಪುರ್ಣ ಆಹಾರ ವಲಯದ ಸರ್ವತೋಮುಖ ತಿಳಿವಳಿಕೆಯನ್ನು ಒದಸಲಿದೆ. ಇದರಿಂದ ರೇವಾ ವಿ.ವಿ. ಕೇವಲ ಕೃಷಿ ಕ್ಷೇತ್ರಕ್ಕೆ ಪುನರ್ ರೂಪ ನೀಡುವುದಷ್ಟೇ ಅಲ್ಲ ಹೆಚ್ಚು ಸುಸ್ಥಿರ ಹಾಗೂ ಸುಭದ್ರ ಭವಿಷ್ಯಕ್ಕಾಗಿ ಕೊಡುಗೆಯನ್ನು ನೀಡಲಿದೆ.
ಸಾಂಪ್ರದಾಯಿಕ ಗಡಿಯಾಚೆಗಿನ ಶಿಕ್ಷಣ:
ರೇವಾ ವಿವಿ ಇಂಜಿನಿಯರಿಂಗ್ ಸಿದ್ಧಾಂತಗಳು ಮತ್ತು ಕೃಷಿ ವಿಜ್ಞಾನ ಪರಿಕಲ್ಪನೆಗಳಿಂದ ಕೂಡಿದ್ದು, ಇದು ವಿದ್ಯಾರ್ಥಿಗಳಿಗೆ ಬಹುಶಿಸ್ತೀಯ ಶಿಕ್ಷಣವನ್ನು ನೀಡುತ್ತದೆ. ಆ ಮೂಲಕ ಸಾಂಪ್ರದಾಯಿಕ ಗಡಿಗಳ ಆಚೆಗೆ ಹೋಗುತ್ತದೆ. ರೇವಾ ವಿವಿ ಹೆಮ್ಮೆಯ ವಿಷಯ ಏನೆಂದರೆ, ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಮತ್ತು ತಮ್ಮ ಕಣ್ಣೆದುರಿನ ಸವಾಲಿಗೆ ಗಮನ ಕೊಡುವುದು ಹೇಗೆ ಎಂದು ತಿಳಿಸಿಕೊಡಲಾಗುತ್ತದೆ. ಆದ್ದರಿಂದಾಗಿ ವಿದ್ಯಾರ್ಥಿಗಳಿಗೆ ಕೇವಲ ಪಠ್ಯಪುಸ್ತಕದ ಜ್ಞಾನ ಮಾತ್ರ ಅಲ್ಲ, ಕೃಷಿ ಉದ್ಯಮದ ನೈಜ ಜಗತ್ತಿನ ಸವಾಲುಗಳನ್ನು ಹೇಗೆ ಬಗೆಹರಿಸುವುದು ಎಂಬ ಬಗ್ಗೆಯೂ ತಿಳಿಸಿಕೊಡಲಿದೆ.
ರೇವಾ ಕೃಷಿ ಟೆಕ್ ಪ್ರಾಜೆಕ್ಟ್:
ಪ್ರಾಯೋಗಿಕ ಕಲಿಕಾ ಪರಿಸರಗಳ ಪರಿವರ್ತನೆ, ತಾಂತ್ರಿಕ ಸಂಯೋಜನೆಯೊಂದಿಗೆ ಶೈಕ್ಷಣಿಕ ಕ್ಷೇತ್ರ ಹಾಗೂ ಉದ್ಯಮದ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸಲಿದೆ. ಇದರೊಂದಿಗೆ ಹಸಿರು ಬದುಕು ಉತ್ತೇಜಿಸಲು, ಸುಸ್ಥಿತ ಕೃಷಿಗೆ ಮತ್ತು ಆಹಾರ ಭದ್ರತೆಯಲ್ಲಿ ಸ್ವಾವಲಂಬನೆ ಸಾಧಿಸಲು ರೇವಾ ವಿವಿ ಕುಲಪತಿ ಡಾ. ಪಿ. ಶ್ಯಾಮರಾಜು ಅವರ ಮಾರ್ಗದರ್ಶನದಲ್ಲಿ ರೇವಾ ಕೃಷಿ ಟೆಕ್ ಪ್ರಾಜೆಕ್ಟ್ (ಆರ್‌ಕೆಟಿಪಿ)ಎಂಬ ಉಪಕ್ರಮ ಸಹ ಆರಂಭಿಸಲಾಗಿದೆ. ಇದೊಂದು ಶೈಕ್ಷಣಿಕ ಉಪಕ್ರಮ ಎಂಬುದಕ್ಕಿಂತ ಹೆಚ್ಚಾಗಿ ಉದ್ಯಮಶೀಲತೆ ಮತ್ತು ಪರಿಸರ ಸುಸ್ಥಿರತೆ ಬೆಸೆದುಕೊಂಡ ಶಿಕ್ಷಣವಾಗಿದೆ.
ಇದರ ಮೂಲಕ ಕೃಷಿ ವಲಯಕ್ಕೆ ಪರಿಣಾಮಕಾರಿ ಕೊಡುಗೆ ನೀಡುವ ನಿಟ್ಟಿನಲ್ಲಿ ಇಲ್ಲಿನ ಪದವೀಧರರು ಸಿದ್ಧರಾಗಲಿದ್ದಾರೆ.