

ಮುಂಬೈ: ಎರಡು ಸಾವಿರ ರೂ. ಮುಖಬೆಲೆಯ ಕರೆನ್ಸಿ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಂಡಿರುವುದಾಗಿ ಕಳೆದ ವರ್ಷ ಮೇ 19ರಂದು ಪ್ರಕಟಿಸಿದ ಬಳಿಕ ಈವರೆಗೆ ಶೇ. 98.04ರಷ್ಟು ನೋಟುಗಳು ಭಾರತೀಯ ರಿಸರ್ವ್ ಬ್ಯಾಂಕ್ಗೆ (ಆರ್ಬಿಐ) ವಾಪಸಾಗಿದ್ದು, ಇನ್ನೂ 6,970 ಕೋಟಿ ರೂ. ಮೌಲ್ಯದ ನೋಟುಗಳು ಜನರ ಬಳಿ ಇವೆ.
ಒಟ್ಟು 3.56 ಲಕ್ಷ ಕೋಟಿ ರೂ. ಮೌಲ್ಯದ ನೋಟುಗಳು 2023ರ ಮೇ 19ರವರೆಗೆ ಚಲಾವಣೆಯಲ್ಲಿದ್ದವು. 2024ರ ಅ. 31ರವರೆಗೆ 6970 ಕೋಟಿ ರೂ. ಮೌಲ್ಯದ ನೋಟುಗಳು ಚಲಾವಣೆಯಲ್ಲಿವೆ. ಈ ನೋಟುಗಳನ್ನು ಎಲ್ಲ ಬ್ಯಾಂಕ್ ಶಾಖೆಗಳಲ್ಲಿ ವಿನಿಮಯ ಮಾಡಿಕೊಳ್ಳಲು ಕಳೆದ ವರ್ಷ ಅ. 7ರವರೆಗೆ ಸಮಯ ನೀಡಲಾಗಿತ್ತು. ನಂತರ ಈ ಸೌಲಭ್ಯವನ್ನು ಬೆಂಗಳೂರು ಸೇರಿದಂತೆ ರಿಸರ್ವ್ ಬ್ಯಾಂಕ್ನ 19 ಕಚೇರಿಗಳಿಗೆ ಸೀಮಿತಗೊಳಿಸಲಾಗಿದೆ.