ರಜನಿಕಾಂತ್‌ಗಾಗಿ ಮನೆಯಲ್ಲೇ ದೇವಸ್ಥಾನ ನಿರ್ಮಿಸಿದ ನಿವೃತ್ತ ಸೈನಿಕ! Rajinikanth Temple

Rajinikanth Temple
Published on

 Rajinikanth Temple : ಸ್ಟಾರ್ ಹೀರೋ, ಹೀರೋಯಿನ್​​ಗಳ ಮೇಲಿರುವ ಪ್ರೀತಿಗೆ  ಖುಷ್ಬೂ, ನಮಿತಾ, ನಯನತಾರಾ, ಸಮಂತಾ, ಹನ್ಸಿಕಾ ಮತ್ತು ನಿಧಿ ಅಗರ್ವಾಲ್‌ಗೆ ಅಭಿಮಾನಿಗಳು ಮಂದಿರ ಕಟ್ಟಿದ್ದಾರೆ. ಇತ್ತೀಚೆಗಷ್ಟೇ ರಜನಿಕಾಂತ್ ಅಭಿಮಾನಿಯೊಬ್ಬರು.. ತಮ್ಮ ನೆಚ್ಚಿನ ನಟನಿಗೆ ತಮ್ಮ ಮನೆಯಲ್ಲಿಯೇ ದೇವಸ್ಥಾನ ನಿರ್ಮಿಸಿ ಪೂಜೆ ಮಾಡುತ್ತಿದ್ದಾರೆ. ಈ ಕುರಿತಾದ ಫೋಟೋಗಳು ಸೋಶಿಯಲ್​​ ಮೀಡಿಯಾದಲ್ಲಿ ಸಖತ್​  ವೈರಲ್​ ಆಗಿದೆ.

ಮಧುರೈ ಜಿಲ್ಲೆಯ ತಿರುಮಂಗಲಂನ ಕಾರ್ತಿಕ್ ಯೋಧನಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಇವರಿಗೆ ರಜನಿಕಾಂತ್ ಎಂದ್ರೆ ಅಚ್ಚುಮೆಚ್ಚು.  ಕಾರ್ತಿಕ್ ಇತ್ತೀಚೆಗಷ್ಟೇ ತನ್ನ ಮನೆಯಲ್ಲೂ ಮಂದಿರ ಕಟ್ಟಿ ರಜನಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ನಿತ್ಯ ಪೂಜೆ ಸಲ್ಲಿಸುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಇದೀಗ ವಿಷಯ ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ತಿಳಿದು  ಕುಟುಂಬ ಸದಸ್ಯರನ್ನು ಚೆನ್ನೈನ ಪೋಯಸ್ ಗಾರ್ಡನ್‌ನಲ್ಲಿರುವ ಅವರ ಮನೆಗೆ ಕರೆತಂದರು. ತಮ್ಮ ಅಭಿಮಾನಿಯನ್ನು ವಿಶೇಷವಾಗಿ ಅಭಿನಂದಿಸಿದ್ದಾರೆ.

ಅವರಿಗೆ ರುಚಿಕರವಾದ ಭಕ್ಷ್ಯಗಳ ಔತಣವನ್ನು ನೀಡಲಾಯಿತು. ಈ ಫೋಟೋಗಳೂ ಈಗ ಸೋಶಿಯಲ್​​  ಮೀಡಿಯಾದಲ್ಲಿ ವೈರಲ್​ ಆಗುತ್ತಿವೆ. ಇದನ್ನು ನೋಡಿದ ರಜನಿಕಾಂತ್ ಅಭಿಮಾನಿಗಳು ತಮ್ಮ ನಾಯಕನ ಜೊತೆಗೆ ಕಾರ್ತಿಕ್ ಬಗ್ಗೆಯೂ ಹೊಗಳುತ್ತಿದ್ದಾರೆ.

ಕಳೆದ ವರ್ಷ ರಜನಿಕಾಂತ್ ಲಾಲ್ ಸಲಾಂ ಮತ್ತು ವೆಟ್ಟೈಯಾನ್ ಸಿನಿಮಾಗಳ ಮೂಲಕ ಪ್ರೇಕ್ಷಕರನ್ನು ಸ್ವಾಗತಿಸಿದ್ದರು. ಸದ್ಯ ಲೋಕೇಶ್ ಕನಕರಾಜ್ ನಿರ್ದೇಶನದಲ್ಲಿ ಕೂಲಿ ಎಂಬ ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net