225 ಕೋಟಿ ರೂ.ಲಾಟರಿ ಗೆದ್ದ ನಿವೃತ್ತ ಎಂಜಿನಿಯರ್! ಗೆಲುವಿನ ಒಂದು ಭಾಗವನ್ನ ದಾನ ಮಾಡ್ತಾರಂತೆ...lottery

lottery engineer
Published on

ಚೆನ್ನೈ: ( lottery ) ಕೆಲವರು ಕಣ್ಣು ಮುಚ್ಚಿ  ಬಿಡುವಷ್ಟರಲ್ಲಿ ಅದೃಷ್ಟ ಬದಲಾಗಿ ರಾತ್ರೋರಾತ್ರಿ ಕೋಟ್ಯಾಧಿಪತಿಗಳು ಆಗಿದ್ದಾರೆ ಎನ್ನುವ ಹಲವು ಉದಾಹರಣೆಗಳನ್ನು ಕೇಳಿದ್ದೇವೆ. ಆದರೆ ಇಲ್ಲೊಬ್ಬ ವ್ಯಕ್ತಿ ಒಬ್ಬ ಕೋಟ್ಯಾಧಿಪತಿ ಎಂದರೆ ಕೇವಲ ಎರಡು ಅಥವಾ ಮೂರು ಕೋಟಿ ರೂಪಾಯಿಗಳಲ್ಲ. ಬರೋಬ್ಬರಿ ೨೨೫ ಕೋಟಿ ರೂ.  ಒಡಯನಾಗಿದ್ದಾನೆ, ಈ ಕುರಿತಾಗಿ ನಾವು ಇಂದು ನಿಮಗೆ ತಿಳಿಸಿಕೊಡಲಿದ್ದೇವೆ...

 ಚೆನ್ನೈನ ನಿವೃತ್ತ ಎಂಜಿನಿಯರ್ ಶ್ರೀರಾಮ್ ರಾಜಗೋಪಾಲನ್ ಅವರಿಗೆ ಅನಿರೀಕ್ಷಿತ ಅದೃಷ್ಟ ಒಲಿದು ಬಂದಿತು. ಯುಎಇಯ 'ಎಮಿರೇಟ್ಸ್ ಡ್ರಾ'ದಲ್ಲಿ 225 ಕೋಟಿ ರೂಪಾಯಿ ಗೆದ್ದಿದ್ದಾರೆ.

ಶ್ರೀರಾಮ್ ರಾಜಗೋಪಾಲನ್ ಅವರಿಗೆ ಫೋನ್ ಟ್ಯಾಪಿಂಗ್ ಮಾಡುವ ಸಾಮಾನ್ಯ ಅಭ್ಯಾಸವಿತ್ತು. ಎಮಿರೇಟ್ಸ್ ಡ್ರಾ MEGA7 ಎಂಬ ಆನ್‌ಲೈನ್‌​ ಆಟದಲ್ಲಿ ಆಸಕ್ತಿ ಇರುತ್ತಿದ್ದ ಶ್ರೀರಾಮ್​​ಗೆ, ಆಗಾಗ ಅದೃಷ್ಟ ಪರೀಕ್ಷಿಸಿಕೊಳ್ಳುವ ಅಭ್ಯಾಸ ಇತ್ತು. ಇದೊಂದು ಆನ್ಲೈನ್​ ಗೇಮ್​.. ಎಮಿರೇಟ್ಸ್ ಡ್ರಾ ನಲ್ಲಿ, PiCK 1, EASY 6, FAST 5,MEGA 7 ಅನ್ನೋ ನಾಲ್ಕು ಹಂತಗಳು ಇರುತ್ತವೆ. ಕೊನೆಯ ಸ್ಟೆಪ್​​ನಲ್ಲಿ ಹೆಚ್ಚು ಹಣ ಡೆಪಾಸಿಟ್​ ಮಾಡಿ, ದುಪ್ಪಟ್ಟು ಹಣ ಡ್ರಾ ಮಾಡಬಹುದು. ಶ್ರೀರಾಮ್​ ಅವರು ಗೇಮ್​ ಆಡಿದ್ದು, ಇದೇ MEGA7 ಸ್ಟೆಪ್​ನಲ್ಲಿ, ಇಲ್ಲಿ 1ರಿಂದ 37 ನಂಬರ್ಸ್​ ಇರುತ್ತವೆ. ಅದರಲ್ಲಿ 7 ನಂಬರ್​ಗಳನ್ನ ಸೆಲೆಕ್ಟ್​ ಮಾಡಿಕೊಳ್ಳಬೇಕಾಗುತ್ತದೆ. ಅದರಲ್ಲಿ 5 ರೀತಿಯ ನಂಬರ್​ ಮ್ಯಾಚ್ ಇರುತ್ತೆ. ಆ 5 ರೀತಿಯ ಮ್ಯಾಚಿಂಗ್​ನಲ್ಲೂ ಇಂತಿಷ್ಟು ಮೊತ್ತ ಅಂತ ಇರುತ್ತೆ. ಶ್ರೀರಾಮ್ ಮಾರ್ಚ್ 16 ಕ್ಕೆ ನಂಬರ್​ಗಳನ್ನ ಸೆಟ್​ ಮಾಡಿದ್ರು. ಆ ದಿನ ಕಣ್ಮುಚ್ಚಿ ಒತ್ತಿದ್ದ ಸಂಖ್ಯೆಯೇ ಈ ದಿನ ₹225 ಕೋಟಿ ಲಾಟರಿಯಾಗಿ ಸಿಕ್ಕಿದೆ.

ಯುಎಇ ಲಾಟರಿ ಇತಿಹಾಸದಲ್ಲಿ ಭಾರತೀಯರೊಬ್ಬರು ಇಷ್ಟು ದೊಡ್ಡ ಬಹುಮಾನ ಗೆದ್ದಿರುವುದು ಇದೇ ಮೊದಲು. ಇದನ್ನು ಎಮಿರೇಟ್ಸ್ ಡ್ರಾ ಕಂಪನಿಯು ಮೇ 22, ಗುರುವಾರ ರಾತ್ರಿ ಅಧಿಕೃತವಾಗಿ ಘೋಷಿಸಿತು.

ಶ್ರೀರಾಮ್ 1998 ರಲ್ಲಿ ಸೌದಿ ಅರೇಬಿಯಾಕ್ಕೆ ತೆರಳಿ ಅಲ್ಲಿ ನೆಲೆಸಿದರು. ಅವರು 2023 ರಲ್ಲಿ ನಿವೃತ್ತರಾದರು ಮತ್ತು ಭಾರತಕ್ಕೆ ಮರಳಿದರು. ಅವನು ತನ್ನ ಹೆಂಡತಿ ಮತ್ತು ಇಬ್ಬರು ಮಕ್ಕಳೊಂದಿಗೆ ವಾಸಿಸುತ್ತಾರೆ. ಮಾರ್ಚ್ 16 ರಂದು ತಮ್ಮ ಹುಟ್ಟುಹಬ್ಬದಂದು ಲಾಟರಿ ಟಿಕೆಟ್ ಖರೀದಿಸಿದ್ದಾಗಿ ಅವರು ಹೇಳಿದರು ಮತ್ತು ಇಷ್ಟು ದೊಡ್ಡ ಮೊತ್ತವನ್ನು ಗೆಲ್ಲುತ್ತೇನೆ ಎಂದು ನಿರೀಕ್ಷಿಸಿರಲಿಲ್ಲ. ಗೆಲುವಿನ ಒಂದು ಭಾಗವನ್ನ ದಾನಕ್ಕೆ ಕೊಡುವುದಾಗಿ ಹೇಳಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net