

ಬೆಂಗಳೂರು: ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರ ಸಮಸ್ಯೆ ಆಲಿಸಿ ಪರಿಹರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆಪಿಸಿಸಿ ಕಚೇರಿಯಲ್ಲಿ ಸಮಯಾವಕಾಶ ನೀಡುತ್ತಿದ್ದು, ಈ ನಿಟ್ಟಿನಲ್ಲಿ ರೂಪುಗೊಂಡಿರುವ ‘ಕಾರ್ಯಕರ್ತರ ಸ್ಪಂದನಾ ಕಾರ್ಯಕ್ರಮ’ದ ಸಭೆಗೆ ಭರದ ಸಿದ್ಧತೆ ನಡೆಸಿದೆ.
ಜುಲೈ 13ರ ಶನಿವಾರ ಬೆಳಗ್ಗೆ 10ರಿಂದ ಸಿಎಂ ಕೆಪಿಸಿಸಿ ಕಚೇರಿಯಲ್ಲಿ ಹಾಜರಿದ್ದು ವೈಯಕ್ತಿಕವಾಗಿ ಅಹವಾಲು ಆಲಿಸಲಿದ್ದಾರೆ.
ಮುಖ್ಯಮಂತ್ರಿಯನ್ನು ಭೇಟಿ ಮಾಡಿ ತಮ್ಮ ಕುಂದುಕೊರತೆ ಪರಿಹರಿಸಿಕೊಳ್ಳಲು ಇಚ್ಛಿಸುವ ಕಾರ್ಯಕರ್ತರು ಹೆಸರು ನೊಂದಾಯಿಸಿಕೊಳ್ಳಬೇಕಾಗುತ್ತದೆ. ಈ ನಿಟ್ಟಿನಲ್ಲಿ ಗೂಗಲ್ ಾರ್ಮ್ ರೂಪದಲ್ಲಿ ನೋಂದಣಿಗೆ ವ್ಯವಸ್ಥೆ ಕೂಡ ಮಾಡಲಾಗಿದೆ. ಮಾಹಿತಿಗೆ ವಿಜಯ್ ಮತ್ತಿಕಟ್ಟಿ (9480774569), ಬಿ.ಆರ್ ನಾಯ್ಡು- (9945490000) ಅವರನ್ನು ಸಂಪರ್ಕಿಸಬಹುದಾಗಿದೆ.