ವಸತಿ ಶಾಲೆಯ ಗೋಡೆಗಳು ಬಿರುಕು

Koppa rain
ಕೊಪ್ಪ ತಾಲೂಕಿನ ಮೇಗೂರಿನ ವಾಲ್ಮೀಕಿ ಆಶ್ರಮ ವಸತಿ ಶಾಲೆಯ ಗೋಡೆಗಳು ಬಿರುಕು ಬಿಟ್ಟಿರುವುದು.
Published on

ಕೊಪ್ಪ: ಧಾರಾಕಾರವಾಗಿ ಕಳೆದ ಏಳೆಂಟು ದಿನಗಳಿಂದ ಸುರಿಯುತ್ತಿದ್ದ ಮಳೆಯು ಶುಕ್ರವಾರ ಸಂಜೆಯಿಂದ ಕೊಂಚ ಬಿಡುವು ನೀಡಿದೆ. ನದಿ, ಹಳ್ಳಗಳಲ್ಲಿ ಎದುರಾಗಿದ್ದ ನೆರೆ ಕೊಂಚ ಮಟ್ಟಿಗೆ ಇಳಿಕೆಯಾಗಿದೆ.
ಕೊಪ್ಪ ತಾಲೂಕಿನ ತುಂಗಾ, ಸೀತಾ, ಬ್ರಾಹ್ಮೀ, ಕಪಿಲಾ, ಅಂಬಳಿಕೆ ನದಿಗಳಲ್ಲಿ ಪ್ರವಾಹ ಎದುರಾಗಿ ಕೆಲವೆಡೆ ರಸ್ತೆ, ತೋಟ, ಗದ್ದೆಗಳು ಜಲಾವೃತಗೊಂಡಿದ್ದವು. ಶನಿವಾರ ಮಳೆಯ ಪ್ರಮಾಣ ಇಳಿಕೆಯಾದ ಹಿನ್ನೆಲೆಯಲ್ಲಿ ಪ್ರವಾಹ ತಗ್ಗಿದೆ.
ಕೊಪ್ಪ ತಾಲೂಕಿನ ಮೇಗೂರಿನ ವಾಲ್ಮೀಕಿ ಆಶ್ರಮ ವಸತಿ ಶಾಲೆಯ ಗೋಡೆಗಳು ಮಳೆಯ ಕಾರಣ ಬಿರುಕು ಬಿಟ್ಟಿದ್ದು ಹಾನಿಯಾಗುವ ಸಂಭವವಿರುತ್ತದೆ. ನರಸೀಪುರ ಗ್ರಾಪಂ ನಿಲುಗುಳಿ ವಾಸಿ ಶಾಂತಮ್ಮ ಅವರ ಮನೆಗೆ ಹಾನಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net