

ಬೆಂಗಳೂರು: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಮಂಗಳವಾರ(ನ.12) ರಂದು ಚಂದ್ರಯಾಣ ಯಶಸ್ಸಿನ ರೂವಾರಿ, ಇಸ್ರೋ ಸಂಸ್ಥೆ ಅಧ್ಯಕ್ಷ ಡಾ.ಎಸ್.ಸೋಮನಾಥ್(Somanath) ಅವರೊಂದಿಗೆ ವಸತಿ ಶಾಲಾ ಮಕ್ಕಳ ಸಂವಾದ ಏರ್ಪಡಿಸಿದೆ.
ನಗರದ ಸುಮನಹಳ್ಳಿ ಬಳಿ ಇರುವ ಡಾ.ಬಾಬು ಜಗಜೀವನರಾಮ್ ಸಂಶೋಧನಾ ಸಂಸ್ಥೆಯಲ್ಲಿ ಮಂಗಳವಾರ ಬೆಳಗ್ಗೆ 11ಕ್ಕೆ ನಡೆಯಲಿದೆ. ಮಕ್ಕಳಲ್ಲಿ ವೈಚಾರಿಕ ಮತ್ತು ವೈಜ್ಞಾನಿಕ ತಿಳಿವಳಿಕೆಯನ್ನು ಬೆಳೆಸಬೇಕೆಂಬ ಉದ್ದೇಶದಿಂದ ಈ ಸಂವಾದ ಆಯೋಜಿಸಲಾಗಿದೆ.
ಇದೇ ಸಂದರ್ಭದಲ್ಲಿ ಅಗಸ್ತ್ಯ ೌಂಡೇಷನ್, ಇಸ್ರೋ, ಹಿಮಾಲಯ ಸ್ಪೇಸ್ ಲ್ಯಾಬ್, ಐಐಎಪಿ, ಹ್ಯಾಂ ರೇಡಿಯೋ, ವರ್ನಾಜ್ ಪ್ಲಾನೆಟೋರಿಯಂ ಹಾಗೂ ಜೆಎನ್‌ಸಿಎಸ್‌ಆರ್ ಮತ್ತಿತತ ಪ್ರತಿಷ್ಠಿತ ಸಂಸ್ಥೆಗಳು ತಮ್ಮ ವೈಜ್ಞಾನಿಕ ಅಂಶಗಳನ್ನು ಪ್ರದರ್ಶಿಸಲಿವೆ. ವಿಧ್ಯಾರ್ಥಿಗಳನ್ನು ಉದ್ದೇಶಿಸಿ ಇಸ್ರೋ ಅಧ್ಯಕ್ಷ ಡಾ.ಎಸ್.ಸೋಮನಾಥ್ ಮಾತನಾಡಲಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಸಂವಾದ ಉದ್ಘಾಟಿಸಲಿದ್ದಾರೆ. ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ, ಹಿಂದುಳಿದ ವರ್ಗಗಳ ಇಲಾಖೆ ಸಚಿವ ಶಿವರಾಜ ತಂಗಡಗಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.