67 ಲಕ್ಷ ರೂ. ಮೌಲ್ಯದ ಚಿನ್ನ ವಶ : ಕಾಸರಗೋಡು ನಿವಾಸಿ ಬಂಧನ

arrest
Published on

ಕಾಸರಗೋಡು: ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ವಿದೇಶದಿಂದ ತರಲಾದ 87.32 ಲಕ್ಷ ರೂ. ಮೌಲ್ಯದ 1223 ಗ್ರಾಂ. ಚಿನ್ನ ವಶಪಡಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಕಾಸರಗೋಡು ಪಡನ್ನ ಕೊವ್ವಲ್ ನಿವಾಸಿ ಪ್ರತೀಶ್ ಎಂಬಾತನನ್ನು ಬಂಧಿಸಿದ್ದಾರೆ. ಶಾರ್ಜಾದಿಂದ ಆಗಮಿಸಿದ ವಿಮಾನದಲ್ಲಿ ಬಂದಿಳಿದ ಈತನ ದೇಹ ತಪಾಸಣೆ ನಡೆಸುವ ಮಧ್ಯೆ ಪ್ಯಾಂಟ್ ಜೇಬಲ್ಲಿ ಚಾಕ್ಲೆಟ್ ಕವರ್‌ನೊಳಗೆ ಪೇಸ್ಟ್ ರೂಪದಲ್ಲಿ ಅವಿತಿರಿಸಲಾಗಿದ್ದ ಚಿನ್ನ ಪತ್ತೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net