ಕಾರ್ಖಾನೆ ಮರು ಚಾಲನೆ ಬಗ್ಗೆ ತೀರ್ಪು ಕಾಯ್ದಿರಿಕೆ : ಅನುಮತಿ ಕೋರಿ ಯತ್ನಾಳ್ ಸಲ್ಲಿಸಿದ್ದ ಅರ್ಜಿ

highcourt
Published on

ಬೆಂಗಳೂರು: ಕಾರ್ಖಾನೆಯ ಕಲುಷಿತ ನೀರು ಮುಲ್ಲಾಮಾರಿ ಜಲಾಶಯಕ್ಕೆ ಬಿಡಲಾಗುತ್ತಿತ್ತು ಎಂಬ ಆರೋಪ ಸಂಬಂಧ ಕೆಎಸ್‌ಪಿಸಿಬಿ ಆದೇಶದ ಅನ್ವಯ ಬಂದ್ ಮಾಡಲಾಗಿದ್ದ ಸಿದ್ಧಸಿರಿ ಇಥೆನಾಲ್ ಕಾರ್ಖಾನೆ ಮರು ಚಾಲನೆಗೊಳಿಸಲು ಅನುಮತಿ ನೀಡುವಂತೆ ಕೋರಿ ಸಲ್ಲಿಕೆಯಾದ ಅರ್ಜಿ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್ ಮಂಗಳವಾರ ತೀರ್ಪು ಪ್ರಕಟಿಸುವುದಾಗಿ ಹೇಳಿದೆ.

ಈ ಕುರಿತಾಗಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಲ್ಲಿಸಿರುವ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್. ವಿ ಅಂಜಾರಿಯಾ ಹಾಗೂ ಕೆ. ವಿ ಅರವಿಂದ್ ಅವರ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಸಕ್ಕರೆ ಕಾರ್ಖಾನೆ ಪುನಃಕಾರ್ಯಚರಿಸಲು ಕೇಂದ್ರ ಸರ್ಕಾರದ ಒಪ್ಪಿಗೆ ಅಗತ್ಯ. ಈ ನಿಟ್ಟಿನಲ್ಲಿ ಅನುಮತಿ ನೀಡುವಂತೆ ಮನವಿ ಸಲ್ಲಿಸಲಾಗಿದೆ. ಈ ಬಗ್ಗೆ 45 ದಿನಗಳಲ್ಲಿ ಯಾವುದೇ ಪ್ರತಿಕ್ರೀಯೆ ನೀಡಿಲ್ಲ ಎಂದಾದರೆ ಸರ್ಕಾರ ಸಮ್ಮತಿ ಸೂಚಿಸಿರುವುದಾಗಿ ಅರ್ಥ. ಇದರ ಅನುಸಾರ ನಮಗೆ ಈಗಾಗಲೇ ಕಾರ್ಖಾನೆ ಮತ್ತೆ ಕಾರ್ಯಚರಿಸಲು ಅನುಮತಿ ದೊರೆತಂತಿದೆ.

ಆದರೆ ಕೆಎಸ್‌ಪಿಸಿಬಿ ನಾವು ಮಾನ್ಯತೆ ಹೊಂದಿಲ್ಲ ಎಂದು ಹೇಳುತ್ತದೆ. ಇಲ್ಲಿ ಸರ್ಕಾರ ಒಪ್ಪಿ ಕೊಂಡಮೇಲೆ ಈ ರೀತಿ ಮಧ್ಯ ಪ್ರವೇಶಿಸುವುದಿ ಒಪ್ಪುವಂತದಲ್ಲ ಎಂದರು.

ವಾದ - ಪ್ರತಿವಾದ ಆಲಿಸಿದ ನ್ಯಾಯಪೀಠ ಪ್ರಕರಣ ಸಂಬಂಧ ಮಂಗಳವಾರ ತೀರ್ಪು ಪ್ರಕಟಿಸುವುದಾಗಿ ಹೇಳಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net