

ಶಿವಮೊಗ್ಗ: ನಗರದ ಹೊರವಲಯ ತೇವರಚಟ್ನಳ್ಳಿ ಗ್ರಾಮದ ಶರಣ್ ಎಂಬುವರ ಮನೆ ಹಿಂಭಾಗದ ಖಾಲಿ ಜಾಗದಲ್ಲಿ ನಾಗರಹಾವಿನ 5 ಮರಿಗಳು ಪತ್ತೆಯಾಗಿವೆ.
ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಉರಗ ಸ್ನೇಹಿ ಕಿರಣ್ ಅವರು ಪ್ಲಾಸ್ಟಿಕ್ ಟಾರ್ಪಲ್ ಕೆಳಭಾಗ, ಪೊದೆಗಳಲ್ಲಿ ಅಡಗಿದ್ದ ನಾಗರಹಾವಿನ 5 ಮರಿಗಳನ್ನು ರಕ್ಷಿಸಿದ್ದಾರೆ. ಕೆಲ ಮರಿಗಳು ತಪ್ಪಿಸಿಕೊಂಡಿವೆ. ಅವುಗಳು ಕಂಡ ವೇಳೆ ಕರೆ ಮಾಡುವಂತೆ ಕುಟುಂಬದವರಿಗೆ ತಿಳಿಸಲಾಗಿದೆ ಎಂದು ಸ್ನೇಕ್ ಕಿರಣ್ ಮಾಹಿತಿ ನೀಡಿದ್ದಾರೆ.