

ಕೋಲಾರ: ಜಿಲ್ಲೆಯ ಮಾಲೂರು ತಾಲೂಕಿನ ಟೇಕಲ್ ಸಮೀಪದ ಮಿಟ್ಟಿಗಾನಹಳ್ಳಿ ಬಳಿ ನೀಲಗಿರಿ ತೋಪಿನಲ್ಲಿ ಕಾಡುಹಂದಿ ಭೇಟೆಗೆ ಅಳವಡಿಸಲಾಗಿದ್ದ ಉರುಳಿಗೆ ಕರಡಿ ಸಿಕ್ಕಿ ಹಾಕಿಕೊಂಡಿದ್ದು, ಅರಣ್ಯ ಇಲಾಖೆ ಅಽಕಾರಿಗಳು ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ.
ಟೇಕಲ್ ಸುತ್ತಮುತ್ತಲಿನ ಬೆಟ್ಟಗುಟ್ಟಗಳಲ್ಲಿ ಜಿಂಕೆ, ಮೊಲ, ಕಾಡು ಹಂದಿ, ಕರಡಿ ಸೇರಿದಂತೆ ಇತರ ಪ್ರಾಣಿಗಳು ವಾಸವಾಗಿದ್ದಾವೆ. ಸ್ಥಳೀಯರು ಈ ಭಾಗದಲ್ಲಿ ಕಾಡಂದಿ ಭೇಟೆ ಆಡುವುದು ಸಾಮಾನ್ಯವಾಗಿದೆ. ಗುರುವಾರ ನೀಲಗಿರಿ ತೋಪಿನಲ್ಲಿ ಅಪರಿಚಿತರು ಉರುಳು ಹಾಕಿದ್ದರು. ಮೇವಿಗಾಗಿ ಬೆಟ್ಟಗುಡ್ಡದಿಂದ ಗ್ರಾಮಕ್ಕೆ ಆಗಮಿಸುತ್ತಿದ್ದ ಕರಡಿ ಉರುಳಿಗೆ ಸಿಕ್ಕ ಹಾಕಿಕೊಂಡು ಇಡೀ ರಾತ್ರಿ ನರುಳಾಡಿದೆ. ಶುಕ್ರವಾರ ಮುಂಜಾನೆ ಉರುಳು ಅಳವಡಿಸಿದ್ದವರು ಹೋಗಿ ನೋಡಿದಾಗ ಕರಡಿ ಕಂಡುಕೂಡಲೇ ಅರಣ್ಯ ಇಲಾಖಾಽಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿದ ಅರಣ್ಯಾಽಕಾರಿಗಳು ಉರುಳಿಗೆ ಸಿಕ್ಕಿ ಹಾಕಿಕೊಂಡಿದ್ದ ಕರಡಿಯನ್ನು ಬಿಡಿಸಲು ಮುಂದಾದರು. ಕರಡಿ ಕಿರುಚಾಟ ಜೋರಾದ ಕಾರಣ ಅಽಕಾರಿಗಳ ಪ್ರಯತ್ನ ವಿಫಲವಾಯಿತು. ಬನ್ನೇರುಘಟ್ಟ ಅರಣ್ಯಧಾಮದ ಪಶುವೈದ್ಯ ಡಾ.ಕಿರಣ್ ತಂಡವನ್ನು ಕರೆಯಿಸಿ, ಕರಡಿಗೆ ಅರವಳಿಕೆ ಔಷಧ ನೀಡಿ ಅದನ್ನು ಪ್ರಜ್ಞೆ ತಪ್ಪಿಸಿ ನಂತರ ಬಲೆಯಲ್ಲಿ ಹಿಡಿಯಲಾಯಿತು. ಹೆಣ್ಣು ಕರಡಿಯಾಗಿದ್ದು ಅದರ ಮರಿಯು ಹಾಸುಪಾಸಿನಲ್ಲಿ ಇರುವುದರಿಂದ, ತಾಯಿ ಕರಡಿಗೆ ಚಿಕಿತ್ಸೆ ನೀಡಿ ಬೆಟ್ಟದ ತಪ್ಪಲಿನಲ್ಲಿ ಬಿಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಕಾರ್ಯಾಚರಣೆಯಲ್ಲಿ ಎಸಿಎಫ್ ಸಹನಕುಮಾರ್, ಆರ್‌ಎಫ್‌ಒ ಧನಲಕ್ಷ್ಮಿ, ಡಿಆರ್‌ಎಫ್ ಹರೀಶ್ ಪಾಲ್ಗೊಂಡಿದ್ದರು.