

ನ್ಯಾಯಮೂರ್ತಿ ನಾಗಮೋಹನ ದಾಸ್ ಆಯೋಗದ ಒಳ ಮೀಸಲಾತಿ ಸಮೀಕ್ಷೆ ವೇಳೆ ಆದಿ ದ್ರಾವಿಡ, ಆದಿ ಆಂಧ್ರ, ಆದಿ ಕರ್ನಾಟಕ, ಆದಿ ಜಾಂಬವ ಜಾತಿ ದೃಢೀಕರಣ ಪತ್ರ ಹೊಂದಿರುವ ಎಲ್ಲ ಪೌರಕಾರ್ಮಿಕರು ಉಪ ಜಾತಿಯಾಗಿ ಕ್ರ.ಸಂ.9 ಅರುಂಧತಿಯಾರ್ ನಮೂದಿಸಬೇಕು ಎಂದು ಅಖಿಲ ಕರ್ನಾಟಕ ಅರುಂಧತಿಯಾರ್ ಮಹಾಸಭಾ ಅಧ್ಯಕ್ಷ ಆರ್.ಕೃಷ್ಣ ಮನವಿ ಮಾಡಿದರು.
ನಮ್ಮಲ್ಲಿ ಕೆಲ ಮುಖಂಡರು ಮಾದಿಗ ಎಂದು ಮಾತ್ರ ನಮೂದಿಸುವಂತೆ ಸಮುದಾಯದ ದಿಕ್ಕು ತಪ್ಪಿಸುತ್ತಿದ್ದಾರೆ. ನಮ್ಮ ಆಚಾರ-ವಿಚಾರಗಳು ಹಾಗೂ ಮಾದಿಗ ಮತ್ತಿತರ ಸಮುದಾಯದ ಆಚಾರ ವಿಚಾರಗಳು ಬೇರೆಯಾಗಿದ್ದು, ಪೌರಕಾರ್ಮಿಕರ ಮುಂದಿನ ಭವಿಷ್ಯಕ್ಕೆ ಅರುಧಂತಿಯಾರ್ ಎಂದೇ ನಮೂದಿಸಿ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು. ಗೌರವಾಧ್ಯಕ್ಷ ನಾಗರಾಜು, ಮುಖಂಡರಾದ ಶಿವಾಜಿರಾಂ, ಕೆ.ನವೀನ್ ಇದ್ದರು.